ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶದ ಮೊದಲ ಹೈಡ್ರೋಜನ್ ಕಾರ್ ಏರಿದ ಸಾರಿಗೆ ಸಚಿವ ನಿತಿನ್ ಗಡ್ಕರಿ !

ನವದೆಹಲಿ: ಕೇಂದ್ರ ಸರ್ಕಾರ ವಿದ್ಯುತ್ ಚಾಲಿತ ವಾಹನ ಬಳಕೆಗೆ ಹೆಚ್ಚಿನ ಒತ್ತು ಕೊಡುತ್ತಿದ್ದಾರೆ.ಅದಕ್ಕೂ ಒಂದು ಹೆಜ್ಜೆ ಮುಂದಕ್ಕೆ ಹೋಗಿರೋ ಸಾರಿಗೆ ಸಚಿವ ನಿತಿನ್ ಗಡ್ಕರಿ ಜಲಜನಕ ಆಧಾರಿತ ಪ್ಯೂಯೆಲ್ ಸೆಲ್ ಚಾಲಿತ ಕಾರ್‌ ನಲ್ಲಿ ಸಂಸತ್ತಿಗೆ ಬಂದು ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.

ಟೊಯೊಟಾ ಕಂಪನಿಯ ಈ ಕಾರ್ ವಿಶೇಷವಾಗಿಯೇ ಇದೆ. ಇದನ್ನ ಟೊಯೊಟಾ ಮಿರೈ ಅಂತಲೇ ಕರೆಯಲಾಗುತ್ತಿದೆ. ಜಲಜನಕ ಆಧಾರಿತ ಪ್ಯೂಯೆಲ್ ಸೆಲ್ ಈ ಕಾರ್‌ನಲ್ಲಿದೆ.ಇದರಲ್ಲಿ ಮೂರು ಹೈಡ್ರೋಜನ್ ಟ್ಯಾಂಕ್‌ಗಳೂ ಇವೆ. ವಿಶೇಷ ಅಂದ್ರೆ ಕೇವಲ ಐದೇ ಐದು ನಿಮಿಷಯದಲ್ಲಿ ಇಂಧನ ಭರ್ತಿ ಮಾಡಬಹುದಾಗಿದೆ.

1.24kWh ಲಿಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಈ ಕಾರ್‌ನಲ್ಲಿದೆ.182 HP ಎಲೆಕ್ಟಿಕ್ ಮೋಟಾರ್ ಕೂಡ ಈ ಕಾರಿಗೆ ಅಳವಡಿಸಲಾಗಿದೆ. ಇಷ್ಟೆಲ್ಲ ವಿಶೇಷತೆಗಳಿರೋ ಈ ಕಾರ್‌ನಲ್ಲಿಯೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರೆ ಪ್ರಯಾಣ ಮಾಡ್ತಿದ್ದಾರೆ.

ದೇಶದ ಈ ಮೊದಲ ಎಫ್‌ಸಿಇವಿ ಟೊಯೊಟಾ ಮಿರೈ ದೇಶದ ಮೊದಲ ಹೈಡ್ರೋಜನ್ ಕಾರ್ ಆಗಿದೆ. ವಾಹನ ಕ್ಷೇತ್ರದಲ್ಲಿ ಹೊಸ ಕಾಂತ್ರಿಗೆ ಇದು ಕಾರಣವೂ ಆಗಲಿದೆ. ಈ ಒಂದು ಯೋಜನೆಗಾಗಿಯೇ ಸರ್ಕಾರ 300 ಕೋಟಿ ಮೀಸಲಿಟ್ಟಿದೆ ಅಂತಲೂ ನಿತಿನ್ ಗಡ್ಕರಿ ಹೇಳಿಕೊಂಡಿದ್ದಾರೆ.

Edited By :
PublicNext

PublicNext

31/03/2022 04:10 pm

Cinque Terre

56.34 K

Cinque Terre

2

ಸಂಬಂಧಿತ ಸುದ್ದಿ