ಬೆಂಗಳೂರು: ಅವರು ಹಲಾಲ್ ಮಾಡಿ ಉಗಿದ ಮಾಂಸವನ್ನು ನಾವು ತಿನ್ನಬೇಕಾ? ಎಂದು ಪ್ರಶ್ನಿಸಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ, ಹಿಂದೂ ಯುವಕರು ಮಾಂಸದ ಅಂಗಡಿ ತೆಗೆಯುಲು ಮುಂದೆ ಬಂದಲ್ಲಿ ಅವರಿಗೆ ಹಣಕಾಸಿನ ಸಹಾಯ ಮಾಡುವುದಾಗಿ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, ಹಿಜಾಬ್ ಹಿಂದೆ ಜಮೀರ್ ಅಹಮದ್ ಖಾನ್, ಖಾದರ್ ಅವರಂತಹ ಕಿಡಿಗೇಡಿಗಳಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಹಿಜಾಬ್, ಭಗವದ್ಗೀತೆ, ಕಾಶ್ಮೀರ ಫೈಲ್ಸ್ ಇಂದ ರಾಜ್ಯ ಕಾಂಗ್ರೆಸ್ ನಾಯಕರಿಗೆ ಮರ್ಮಾಘಾತವಾಗಿದೆ. ಇದೇ ರೀತಿ ಹೋದ್ರೆ ರಾಜ್ಯದಲ್ಲಿ ಕಾಂಗ್ರೆಸ್ 40-50 ಸೀಟು ಬರಲ್ಲ ಎಂದರು. ಮುಸ್ಲಿಂ ಸಮುದಾಯದ ಮಾಂಸದ ಅಂಗಡಿಗಳಲ್ಲಿ, ಅವರು ಹಲಾಲ್ ಮಾಡಿ ಉಗಿದ ಮಾಂಸವನ್ನ ನಾವು ತಿನ್ಬೇಕಾ? ಎಂದು ಅವರು, ಹಿಂದೂ ಯುವಕರು ಮಾಂಸದ ಅಂಗಡಿ ತೆಗೆಯಲು ಮುಂದೆ ಬಂದ್ರೆ ನಾನೇ ಸಹಾಯ ಮಾಡುವೆ ಎಂದು ಘೋಷಿಸಿದರು.
PublicNext
30/03/2022 03:57 pm