ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಲೂಟಿಗಾರ ಮೋದಿ ಸರ್ಕಾರ’ : ಕಚ್ಚಾ ತೈಲ ಬೆಲೆ ಇಳಿದ್ರು ತಗ್ಗದ ಪೆಟ್ರೋಲ್-ಡೀಸೆಲ್ ಬೆಲೆ ರಾಗಾ ಗರಂ

ನವದೆಹಲಿ: ಕಚ್ಚಾತೈಲದ ಬೆಲೆ ಇಳಿಕೆ ಕಂಡಿದೆ. ಆದರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏಕೆ ಕಡಿಮೆಯಾಗಿಲ್ಲ. ಮೊದಲು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ಮಾಡಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.

ಕಚ್ಚಾ ತೈಲದ ಬೆಲೆಯು ಒಂದು ಗ್ಯಾಲನ್ ಗೆ 7.3 ಡಾಲರ್ ನಷ್ಟು ಕುಸಿದಿದೆ. ಹೀಗಾಗಿ ತೈಲ ಕಂಪನಿಗಳು ಬೆಲೆಗಳನ್ನು ಕಡಿಮೆ ಮಾಡಿದರೆ ಪೆಟ್ರೋಲ್ ಬೆಲೆ ಲೀಟರ್ ಗೆ 8 ರೂಪಾಯಿಗಳಷ್ಟು ಕುಸಿಯುತ್ತದೆ ಎಂಬ ಪತ್ರಿಕೆಯೊಂದರ ವರದಿಯನ್ನು ಟ್ಯಾಗ್ ಮಾಡಿ ಟ್ವಿಟ್ ಮಾಡಿದ್ದಾರೆ.

'ಇಷ್ಟುದಿನ ಬೆಲೆ ಏರಿಕೆಯಾಗಿದ್ದು ಸಾಕು, ಕನಿಷ್ಠ ಈಗಲಾದರೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ತಗ್ಗಿಸಿ' ಎಂದಿರುವ ರಾಹುಲ್, 'PetrolDieselPrice' ಮತ್ತು 'FuelLoot' ಎಂದು ಹ್ಯಾಷ್ ಟ್ಯಾಗ್ ಹಾಕಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

'ಲೂಟಿಗಾರ ಮೋದಿ ಸರ್ಕಾರವು ಏಕೆ ಬಡವರ, ಮಧ್ಯಮ ವರ್ಗದ ಮತ್ತು ಸಂಬಳದಾರರ ಜೇಬಿನಿಂದ ಡಕಾಯಿತಿ ಮಾಡುವುದನ್ನು ನಿಲ್ಲಿಸುತ್ತಿಲ್ಲ. ಸದ್ಯ ಚುನಾವಣೆಗಳು ಮುಗಿದಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡಿ' ಎಂದಿದ್ದಾರೆ.

Edited By : Nirmala Aralikatti
PublicNext

PublicNext

05/01/2022 07:47 pm

Cinque Terre

46.53 K

Cinque Terre

20

ಸಂಬಂಧಿತ ಸುದ್ದಿ