ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಇನ್ಫೋಸಿಸ್ ದೇಶವಿರೋಧಿ'- ಪಾಂಚಜನ್ಯ ಆರೋಪ ಸರಿಯಲ್ಲ; ಸೀತಾರಾಮನ್

ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌) ಮುಖವಾಣಿ 'ಪಾಂಚಜನ್ಯ' ಪ್ರಕಟವಾದ ಲೇಖನವೊಂದು 'ಇನ್ಫೋಸಿಸ್‌ ದೇಶದ್ರೋಹಿಗಳೊಂದಿಗೆ ಸೇರಿಕೊಂಡಿದೆ' ಎಂದು ಆರೋಪಿಸಿತ್ತು. ಈ ವಿಚಾರಕ್ಕೆ ಅನೇಕರು ಭಾರಿ ವಿರೋಧ ವ್ಯಕ್ತಪಡಿಸಿದ್ದು, ಸ್ವತಃ ಆರ್‌ಎಸ್‌ಎಸ್‌ 'ಪಾಂಚಜನ್ಯ' ಲೇಖನಕ್ಕೂ ನಮಗೂ ಸಂಬಂಧವಿಲ್ಲ ಎಂದಿತ್ತು.

ಇದೇ ವಿಚಾರವಾಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, "ಪಾಂಚಜನ್ಯವು ಹೊಸ ತೆರಿಗೆ ಪೋರ್ಟಲ್ ದೋಷಗಳ ಕುರಿತು ಇನ್ಫೋಸಿಸ್ ಅನ್ನು 'ದೇಶವಿರೋಧಿ' ಎಂದು ಕರೆದಿದೆ. ಇದನ್ನು ನಾನು ಒಪ್ಪುದಿಲ್ಲ. ಇದು ಲೇಖಕರ ವೈಯಕ್ತಿಕ ಅಭಿಪ್ರಾಯ" ಎಂದು ಹೇಳಿದ್ದಾರೆ.

Edited By : Vijay Kumar
PublicNext

PublicNext

14/09/2021 08:19 pm

Cinque Terre

180.83 K

Cinque Terre

12

ಸಂಬಂಧಿತ ಸುದ್ದಿ