ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪತಂಜಲಿಯ ತುಪ್ಪ ಕಲಬೆರಕೆ; ಆಹಾರ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿಲ್ಲ; FSSD ವರದಿ

ನವದೆಹಲಿ: ಹರಿದ್ವಾರದಲ್ಲಿರುವ ಯೋಗಗುರು ರಾಮದೇವ್ ಅವರ ಪತಂಜಲಿ ಕಂಪನಿಯು ತಯಾರಿಸುತ್ತಿರುವ ತುಪ್ಪವು ಆಹಾರ ಸುರಕ್ಷತೆ ಮತ್ತು ಔಷಧಿಗಳ ಇಲಾಖೆ (ಎಫ್ಎಸ್‌ಡಿಡಿ) ನಡೆಸಿರುವ ಪರೀಕ್ಷೆಯಲ್ಲಿ ವಿಫಲಗೊಂಡಿದೆ. ಪತಂಜಲಿಯ ತುಪ್ಪದ ಸ್ಯಾಂಪಲ್ನಲ್ಲಿ ಕಲಬೆರಕೆಯಿರುವುದು ಮತ್ತು ಆಹಾರ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿಲ್ಲ ಎನ್ನುವುದು ರಾಜ್ಯ ಮತ್ತು ಕೇಂದ್ರೀಯ ಪ್ರಯೋಗಾಲಯಗಳು ನಡೆಸಿರುವ ಪರೀಕ್ಷೆಗಳಲ್ಲಿ ಪತ್ತೆಯಾಗಿದೆ ಎಂದು ವರಿದ ಮಾಡಿದೆ.

ಪತಂಜಲಿಯ ‘ಆಕಳ ತುಪ್ಪ’ದ ಸ್ಯಾಂಪಲ್ ಅನ್ನು ಉತ್ತರಾಖಂಡದ ತೆಹ್ರಿಯಲ್ಲಿನ ಅಂಗಡಿಯೊಂದರಿಂದ ಪಡೆದುಕೊಂಡು ರಾಜ್ಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿ ನಡೆಸಲಾದ ಪರೀಕ್ಷೆಗಳಲ್ಲಿ ಅದರಲ್ಲಿ ಕಲಬೆರಕೆ ಪತ್ತೆಯಾಗಿದೆ ಮತ್ತು ಅಗತ್ಯ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲಗೊಂಡಿದೆ ಎನ್ನಲಾಗಿದೆ. ಈ ಹಿಂದೆ 2021ರಲ್ಲಿ ಪತಂಜಲಿ ತುಪ್ಪವು ಆರೋಗ್ಯಕ್ಕೆ ಹಾನಿಕರ ಎಂದು ಎಫ್ಎಸ್‌ಡಿಡಿ ಪತ್ತೆ ಹಚ್ಚಿತ್ತು.

ಆದರೆ ಪರೀಕ್ಷಾ ವರದಿಯನ್ನು ಒಪ್ಪಿಕೊಳ್ಳಲು ರಾಮದೇವರ ಕಂಪನಿಯು ನಿರಾಕರಿಸಿತ್ತು ಮತ್ತು ಅದು ತಪ್ಪಾಗಿದೆ ಎಂದು ಪ್ರತಿಪಾದಿಸಿತ್ತು. ಬಳಿಕ ಸ್ಯಾಂಪಲ್ ಅನ್ನು ಕೇಂದ್ರೀಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು ಮತ್ತು ಅಲ್ಲಿಯೂ ಅದೇ ಫಲಿತಾಂಶ ಬಂದಿತ್ತು. ಈಗ ಪತಂಜಲಿಯ ತುಪ್ಪವು ಕೇಂದ್ರೀಯ ಪ್ರಯೋಗಶಾಲೆಯ ಪರೀಕ್ಷೆಯಲ್ಲಿಯೂ ವಿಫಲಗೊಂಡಿರುವುದರಿಂದ ಎಫ್ಎಸ್‌ಡಿಡಿ ತೆಹ್ರಿ ಜಿಲ್ಲೆಯ ಎಸ್‌ಡಿಎಮ್ ನ್ಯಾಯಾಲಯದಲ್ಲಿ ಪತಂಜಲಿ ವಿರುದ್ಧ ಮೊಕದ್ದಮೆಯನ್ನು ದಾಖಲಿಸಲಿದೆ.

Edited By : Abhishek Kamoji
PublicNext

PublicNext

22/08/2022 04:52 pm

Cinque Terre

35.94 K

Cinque Terre

13

ಸಂಬಂಧಿತ ಸುದ್ದಿ