ನವದೆಹಲಿ:ಭಾರತ ದೇಶವನ್ನ ಬಡ ರಾಷ್ಟ್ರ ಅಂತಲೇ ಕರೆಯೋ ಟೈಮ್ ಒಂದಿತ್ತು. ಆದರೆ, ಈಗ ಅದು ಬದಲಾಗಿದೆ. ವಿಶ್ವ ಸಂಸ್ಥೆನೇ ಈಗ ಭಾರತ ಆರ್ಥಿಕ ಪ್ರಗತಿಯಲ್ಲಿ ನಂಬರ್ ಒನ್ ಆಗಲಿದೆ ಅಂತಲೇ ಹೇಳಿದೆ.
ಉಕ್ರೇನ್ ಮತ್ತು ರಷ್ಯಾ ದೇಶಗಳು ಯುದ್ಧ ಮಾಡುತ್ತಲೇ ಇವೆ. ಇದರ ಪರಿಣಾಮ ಜಾಗತಿಕ ಆರ್ಥಿಕತೆ ಮೇಲೆ ಬಿದ್ದಿದೆ. ಆದರೂ ಕೂಡ ಭಾರತ ದೇಶ ಆರ್ಥಿಕ ಪ್ರಗತಿಯಲ್ಲಿ ಟಾಪ್ ಅಲ್ಲಿಯೇ ಇದೆ.
ಹೌದು. 2022ನೇ ಸಾಲಿನಲ್ಲಿ ಭಾರತ ಶೇಕಡ 6.4 ರಷ್ಟು ಪ್ರಗತಿ ಕಾಣುತ್ತದೆ. ವಿಶ್ವ ಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ ವಿಶ್ವದ ಆರ್ಥಿಕ ಪರಿಸ್ಥಿತಿ ಹಾಗೂ ಮುನ್ನೋಟ ಎಂಬ ವರದಿ ಬಿಡುಗಡೆ ಮಾಡಿದೆ. ಅದರಲ್ಲಿಯೇ ಭಾರತದ ಆರ್ಥಿಕ ಪ್ರಗತಿಯ ಭವಿಷ್ಯದಲ್ಲಿ ಸತ್ಯವನ್ನ ಹೇಳಿದೆ.
PublicNext
20/05/2022 10:19 am