ಲಖನೌ(ಉತ್ತರ ಪ್ರದೇಶ): ಪಂಚರಾಜ್ಯ ಚುನಾವಣೆಗೆ ಹೆಚ್ಚುಕಡಿಮೆ ಒಂದೇ ತಿಂಗಳು ಬಾಕಿ. ಇದೇ ಹೊತ್ತಲ್ಲಿ ಉತ್ತರ ಪ್ರದೇಶದಾದ್ಯಂತ ಆ ಒಂದು ವಿಚಾರವಾಗಿ ಬಿಸಿಬಿಸಿ ಚರ್ಚೆ ಆಗುತ್ತಿದೆ. ಆ ವಿಷಯ ಮುಂದಿನ ಸಿಎಂ ಯಾರಾಗ್ತಾರೆ ಅನ್ನೋದು. ಒಂದೆಡೆ ರಾಜಕೀಯ ಲೆಕ್ಕಾಚಾರ, ಇನ್ನೊಂದೆಡೆ ಮತದಾರ ಪ್ರಭುಗಳ ಲೆಕ್ಕಾಚಾರ ನಡೆದಿದೆ. ಇನ್ನೊಂದೆಡೆ ಗ್ರಹಗತಿಗಳ ಲೆಕ್ಕಾಚಾರದ ಮೇಲೆ ಜ್ಯೋತಿಷಿಗಳು ಕೂಡ ಲೆಕ್ಕಾಚಾರ ಶುರುಹಚ್ಚಿಕೊಂಡಿದ್ದಾರೆ.
ಈ ಬಗ್ಗೆ ಖ್ಯಾತ ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಅವರು ಈಗಲೇ ಭವಿಷ್ಯ ನುಡಿದಿದ್ದಾರೆ. ಸದ್ಯ ಅವರು ಫೇಸ್ ಬುಕ್‌ನಲ್ಲಿ ಯೋಗಿ ಆದಿತ್ಯನಾಥ್ ಅವರ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಬರೆದಿದ್ದಾರೆ. 'ಆದಿತ್ಯನಾಥ್ ಅವರಿಗೆ ಚಂದ್ರಚತುರ್ಥದಲ್ಲಿ ನಿಪುಣ ಯೋಗ ಇದೆ. ಉತ್ತರ ಪ್ರದೇಶದ ಫಲಿತಾಂಶದ ಹೊತ್ತಿಗೆ ಚಂದ್ರ ದಶಮದಲ್ಲಿ ನಿಪುಣ ಯೋಗ ಅಂದರೆ ಮತ್ತೊಮ್ಮೆ ಯೋಗಿ ಆದಿತ್ಯನಾಥ್ ಅವರು ಕಾರ್ಯಪ್ರವೃತ್ತರಾಗುವ ಅವಕಾಶ ಸಿಗಲಿದೆ. ಅವರ ಪರವಾಗಿ 284 ಸ್ಥಾನಗಳು ಬರಲಿವೆ ಎಂದು ಅಮ್ಮಣ್ಣಾಯ ಹೇಳಿದ್ದಾರೆ.
ಇನ್ನು ಅಮ್ಮಣ್ಣಾಯ ಅವರ ಈ ಪೋಸ್ಟ್‌ಗೆ ಜನರಿಂದ ಮಿಶ್ರ ಅಭಿಪ್ರಾಯದ ಕಾಮೆಂಟ್‌ಗಳು ಬರುತ್ತಿವೆ.
ಇನ್ನು 2024ರ ಸಾರ್ವತ್ರಿಕ ಚುನಾವಣೆ ಬಗ್ಗೆ ಈ ಮುಂಚೆ ಬರೆದಿದ್ದ ಅಮ್ಮಣ್ಣಾಯ, ಈಗಿನ ವಿದ್ಯಮಾನದಲ್ಲಿ ಲೋಕಸಭೆ ಚುನಾವಣೆ ಬಗ್ಗೆ ಅಳತೆಗೋಲು ಮಾಡಲು ಸಾಧ್ಯವಿಲ್ಲ. ಅದನ್ನು ಹೇಳಲು ಗ್ರಹಸ್ಥಿತಿಯೇ ಮುಖ್ಯ. ಆವರೆಗಿನ ಜಾತಕದ ಪ್ರಕಾರ ಪ್ರಧಾನಿ ಮೋದಿಯವರ ಮರುಆಯ್ಕೆ ಸಾಧ್ಯವಿದೆ ಎಂದು ಅಮ್ಮಣ್ಣಾಯ ಅಭಿಪ್ರಾಯ ವ್ಯಕ್ತಪಡಿಸಿದ್ದರು.
PublicNext
30/01/2022 12:23 pm