ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ಮೋದಿ ಅಧಿಕಾರದಲ್ಲಿ ಇರುವವರೆಗೂ ಕಂಪನಿಗಳು ರೈತರ ಜಮೀನು ಕಸಿಯಲು ಸಾಧ್ಯವಿಲ್ಲ'

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರದಲ್ಲಿ ಇರುವವರೆಗೂ ಯಾವ ಕಾರ್ಪೊರೇಟ್ ಕಂಪನಿಯೂ ರೈತರ ಜಮೀನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಕಿಸಾನ್‌ಗಡ ಗ್ರಾಮದ ರೈತರನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದ ಅವರು, 'ಹೊಸ ಕೃಷಿ ಕಾಯ್ದೆಗಳು ಜಾರಿಯಾದರೂ ಬೆಂಬಲ ಬೆಲೆ ಮುಂದುವರಿಯಲಿದ್ದು, ಮಂಡಿಗಳು ಸಹ ಕಾರ್ಯ ನಿರ್ವಹಿಸಲಿವೆ. ಹೊಸ ಕೃಷಿ ಕಾಯ್ದೆಯ ಸಂದೇಹಗಳ ನಿವಾರಣೆಗಾಗಿ ರೈತರೊಂದಿಗೆ ತೆರೆದ ಮನಸ್ಸಿನಿಂದ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿದೆ’ ಎಂದು ಹೇಳಿದರು.

ಬೆಂಬಲ ಬೆಲೆ ಸೇರಿದಂತೆ ನೂತನ ಕಾಯ್ದೆಗಳಲ್ಲಿ ಅಡಕವಾಗಿರುವ ಅಂಶಗಳ ಬಗ್ಗೆ ಕಾಂಗ್ರೆಸ್‌ ಹಾಗೂ ಇತರ ವಿರೋಧ ಪಕ್ಷಗಳು ಸುಳ್ಳು ಹೇಳುತ್ತಿವೆ. ರೈತರ ಅಭಿವೃದ್ಧಿಯೇ ಮೋದಿ ನೇತೃತ್ವದ ಸರ್ಕಾರದ ಆದ್ಯತೆಯಾಗಿದೆ ಎಂದರು.

Edited By : Vijay Kumar
PublicNext

PublicNext

25/12/2020 01:52 pm

Cinque Terre

54.65 K

Cinque Terre

7

ಸಂಬಂಧಿತ ಸುದ್ದಿ