ಬೆಂಗಳೂರು: ಮೂಡಿಗೆರೆಯ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಬೆಂಗಳೂರಿನ ಶೇಷಾದ್ರಿಪುರಂ ಸಂಚಾರಿ ಪೊಲೀಸರು ಮಾಸ್ಕ್ ದಂಡ ವಿಧಿಸಿದ್ದಾರೆ. ಇದರಿಂದ ಕೆರಳಿದ ಶಾಸಕರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಸಚಿವ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಎಂ.ಪಿ.ಕುಮಾರಸ್ವಾಮಿ ಅವರು, ''ನಾನು ಬಾಡಿಗೆ ಕಾರಿನಲ್ಲಿ ಶೇಷಾದ್ರಿಪುರಂ ಕಡೆಯಿಂದ ಶಾಸಕರ ಭವನಕ್ಕೆ ತೆರಳುತ್ತಿದ್ದಾಗ ವಿನಾ ಕಾರಣ ಕಾರು ನಿಲ್ಲಿಸಿ ಕಾರಿನ ಟಿಂಟ್ ಗ್ಲಾಸ್ ಇಳಿಸಿ ಮಾಸ್ಕ್ ಹಾಕಿದ್ದರೂ 250 ರೂ ದಂಡ ವಿಧಿಸಿದ್ದಾರೆ. ಆ ಸಂದರ್ಭ ನಾನು ಜವಾಬ್ದಾರಿಯುತ ವ್ಯಕ್ತಿಯಾಗಿ ಮರು ಮಾತನಾಡದೆ ದಂಡ ಕಟ್ಟಿರುತ್ತೇನೆ. ಆದರೆ ವಿನಾ ಕಾರಣ ಕಟ್ಟಿಸಿಕೊಂಡಿರುವುದು ಆಕ್ಷೇಪಾರ್ಹ. ಹೀಗಾಗಿ ಪೊಲೀಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು'' ಎಂದು ಆಗ್ರಹಿಸಿದ್ದಾರೆ.
PublicNext
24/12/2020 07:26 pm