ಬೆಂಗಳೂರು: ರಾಜ್ಯ ಸರ್ಕಾರ ಜಾರಿಗೆ ತಂದಿರುವ 'ನೈಟ್ ಕರ್ಫ್ಯೂ' ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಸೇರಿದಂತೆ ಹಿರಿಯ ಸಚಿವರು ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಮನೆಗೆ ದೌಡಾಯಿಸಿ ಸಭೆ ನಡೆಸಿದ್ದಾರೆ.
ಸಬೆಯ ಬಳಿಕ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ‘ಕೋವಿಡ್ ವಿಚಾರದಲ್ಲಿ ವಿರೋಧ ಪಕ್ಷಗಳಿಂದ ಯಾವುದೇ ಸಹಕಾರ ಸಿಕ್ಕಿಲ್ಲ. ಅವರಿಂದ ಸಹಕಾರ ಸಿಗುತ್ತದೆ ಎಂಬ ನಿರೀಕ್ಷೆಯೂ ನಮಗಿಲ್ಲ’ ಎಂದರು.
ಶಾಲಾ ಕಾಲೇಜುಗಳ ಆರಂಭ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಈವರೆಗೂ ಜನವರಿ 1 ರಿಂದ ಆರಂಭ ಎಂಬುದರಲ್ಲಿ ಬದಲಾವಣೆ ಇಲ್ಲ. ಒಂದು ವೇಳೆ ರೂಪಾಂತರ ಕೊರೊನಾ ಕಂಡು ಬಂದರೆ ಮಾತ್ರ ನಿರ್ಧಾರ ಪುನರ್ ಪರಿಶೀಲನೆ ಮಾಡುತ್ತೇವೆ. ಇದೇ 28 ಹಾಗೂ 29ರಂದು ಈ ಬಗ್ಗೆ ಸಭೆ ನಡೆಸಿ ತೀರ್ಮಾನಿಸುತ್ತೇವೆ’ ಎಂದರು.
PublicNext
24/12/2020 04:34 pm