ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾತ್ರಿ ಮಲಗುವಾಗ ಎಲ್ರೂ ನಡುವೆ ಮೂರಡಿ ಜಾಗ ಬಿಟ್ಟಿರುತ್ತಾರೆ: ಯತ್ನಾಳ್

ಬೆಂಗಳೂರು: ರಾಜ್ಯ ಸರ್ಕಾರ ರಾತ್ರಿ ಕರ್ಫ್ಯೂ ನಿರ್ಧಾರ ಪ್ರಕಟಿಸಿದ್ದೇ ತಡ. ಟೀಕೆಗಳ ಸುರಿಮಳೆಯೇ ಆಗುತ್ತಿದೆ. ಈಗ ಈ ನಿರ್ಧಾರಕ್ಕೆ ಬಿಜೆಪಿ ಶಾಸಕರೇ ಅಪಸ್ವರ ಎತ್ತಿದ್ದಾರೆ. ಒಂದು ಕಡೆ ಎಂಎಲ್‌ಸಿ ವಿಶ್ವನಾಥ್ ತಕರಾರಿನ ಮಾತು ಆಡಿದ್ದರೆ ಇನ್ನೊಂದು ಕಡೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ಅಪಸ್ವರ ಎತ್ತಿದ್ದಾರೆ.

ರಾತ್ರಿ ಕರ್ಫ್ಯೂ ಜಾರಿಮಾಡುವುದರ ವೈಜ್ಞಾನಿಕ ಹಿನ್ನೆಲೆ ಏನು ಎಂಬುದು ನನಗೆ ಅರ್ಥವಾಗುತ್ತಿಲ್ಲ. ರಾತ್ರಿ ಯಾರೂ ಹೊರಗೆ ಅಡ್ಡಾಡುವುದಿಲ್ಲ. ಎಲ್ಲರೂ ಮನೆಯಲ್ಲೇ ಇರುತ್ತಾರೆ. ಹಗಲಿನಲ್ಲಿಯೂ ಜನ ಓಡಾಡುತ್ತಾರೆ..ರಾತ್ರಿ ಮೂರು ಗಜ ಅಂತರದಲ್ಲಿಯೇ ಮಲಗುತ್ತಾರೆ. ಹಾಗಾಗಿ ಸಿಎಂ ಇನ್ನೊಮ್ಮೆ ನಿರ್ಧಾರ ಪರಿಶೀಲನೆ ಮಾಡಬೇಕು ಎಂದಿದ್ದಾರೆ.

Edited By : Nagaraj Tulugeri
PublicNext

PublicNext

24/12/2020 04:00 pm

Cinque Terre

77.97 K

Cinque Terre

4

ಸಂಬಂಧಿತ ಸುದ್ದಿ