ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಅನೇಕ ಬದಲಾವಣೆ ತರುವ ಮೂಲಕ ಸ್ಮರಣೀಯ ವ್ಯಕ್ತಿತ್ವ ಹೊಂದಿದ್ದ ಅನೇಕ ರಾಜಕೀಯ ಧುರೀಣರು 2020ರಲ್ಲಿ ಅಗಲಿರುವುದು ನಿಜಕ್ಕೂ ಬೇಸರದ ಸಂಗತಿ.
ಪ್ರಣಬ್ ಮುಖರ್ಜಿ : ಕಾಂಗ್ರೆಸ್ ಧುರೀಣರಾಗಿರುವ ಭಾರತ ರತ್ನ ಪುರಸ್ಕೃತ, ಮಾಜಿ ರಾಷ್ಟ್ರಪತಿಗಳು ಈ ವರ್ಷ ಅಸುನೀಗಿದರು. ಆಗಸ್ಟ್ 31ರಂದು ಅವರು ಉತ್ತಮ ಆರ್ಥಿಕ ಚಿಂತಕರಾಗಿ ಪ್ರಶಂಸೆ ಪಡೆದವರು.
ರಘುವಂಶ ಪ್ರಸಾದ್ ಸಿಂಗ್: ಆರ್ಜೆಡಿ ನಾಯಕರಾಗಿರುವ ಸಿಂಗ್, ಯುಪಿಎ ಸರ್ಕಾರದಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಪರಿಚಯಿಸಿದ ಸಿಂಗ್ ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದವರು.
ಮೋತಿಲಾಲ್ ವೊರಾ: ಕಾಂಗ್ರೆಸ್ನ ಧುರೀಣ ನಾಯಕರಾದ ವೋರಾ 93ನೇ ಹುಟ್ಟು ಹಬ್ಬ ಆಚರಿಸಿದ ಮರುದಿನವೇ ಸಾವನ್ನಪ್ಪಿದ್ದು, ನಿಜಕ್ಕೂ ದುಃಖಕರ, ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಇವರು, ಉತ್ತರ ಪ್ರದೇಶ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಸುರೇಶ್ ಅಂಗಡಿ: ಕೇಂದ್ರ ರಾಜ್ಯ ರೈಲ್ವೆ ಸಚಿವರಾಗಿದ್ದ ಸುರೇಶ್ ಅಂಗಡಿ ಕೊರೋನಾ ಸೋಂಕಿಗೆ ಒಳಗಾಗಿ ಸಾವನ್ನಪ್ಪಿದರು. ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾದ ಕೀರ್ತಿ ಸುರೇಶ್ ಅಂಗಡಿಗಿದೆ.
ಅಹ್ಮದ್ ಪಟೇಲ್ : ಕಾಂಗ್ರೆಸ್ನ ನಿಷ್ಠಾವಂತ ಕಾರ್ಯಕರ್ತರಾಗಿ ಗುರುತಿಸಿಕೊಂಡವರು ಅಹ್ಮದ್ ಪಟೇಲ್. ಕಾಂಗ್ರೆಸ್ ಸಂಕಷ್ಟ ಕಾಲದಲ್ಲಿ ನೆರವಾದ ನಾಯಕರು ಇವರಾಗಿದ್ದಾರೆ.
ತರುಣ್ ಗೋಗಾಯಿ : ಕಾಂಗ್ರಸ್ ಹಿರಿಯ ನಾಯಕ, ಅಸ್ಸಾಂನ ಮಾಜಿ ಸಚಿವರಾಗಿ ಇವರು ಸೇವೆ ಸಲ್ಲಿಸಿದ್ದಾರೆ. 84 ವರ್ಷದ ಗೋಗಾಯಿ ಕಳೆದ ತಿಂಗಳು ಅಸುನೀಗಿದ್ದರು.
ಜಸ್ವಂತ್ ಸಿಂಗ್ : ಕೇಂದ್ರದ ಮಾಜಿ ಸಚಿವರಾಗಿದ್ದ ಇವರು ಸೆಪ್ಟೆಂಬರ್ನಲ್ಲಿ ಸಾವನ್ನಪ್ಪಿದರು. ವಾಜಪೇಯಿ ಸರ್ಕಾರದಲ್ಲಿ ರಕ್ಷಣಾ ಸಚಿವರಾಗಿ ಇವರು ಕಾರ್ಯ ನಿರ್ವಹಿಸಿದ್ದಾರೆ.
ರಾಮ್ ವಿಲಾಸ್ ಪಾಸ್ವಾನ್ : ಬಿಹಾರ ರಾಜಕೀಯ ಧುರೀಣರಾಗಿರುವ ಇವರು ಕಳೆದ ಅಕ್ಟೋಬರ್ 8ರಂದು ಸಾವನ್ನಪ್ಪಿದರು. ಲೋಕ ಜನಶಕ್ತಿ ಪಕ್ಷ ಹುಟ್ಟುಹಾಕಿದ, ದಲಿತ ನಾಯಕ ಇವರು.
PublicNext
22/12/2020 09:56 pm