ಮೈಸೂರು: ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ ವಿರೋಧಿಸಿ ಜನವರಿ 9 ರಂದು ರಾಜ್ಯದಲ್ಲಿ ಎರಡನೇ ಹಂತದ ಚಳವಳಿ ಆರಂಭಿಸಲಿದ್ದೇವೆ. ಕರ್ನಾಟಕದ ಎಲ್ಲ ಕಡೆ ರೈಲು ಸೇವೆಯನ್ನು ಬಂದ್ ಮಾಡಿ ಪ್ರತಿಭಟಿಸಲಿದ್ದೇವೆ ಎಂದು ಕನ್ನಡ ಚಳವಳಿ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಇವತ್ತು ಮೈಸೂರಿನ ರೈಲ್ವೆ ನಿಲ್ದಾಣದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಮರಾಠ ಅಭಿವೃದ್ಧಿ ಪ್ರಾಧಿಕಾರ ಬೇಡ ಅಂತ ಹೇಳಿ ರಾಜ್ಯಾದ್ಯಂತ ಈಗಾಗಲೇ ಬಂದ್ ಮಾಡಲಾಗಿದೆ. ಆದರೂ ಸರ್ಕಾರ ಪ್ರಾಧಿಕಾರವನ್ನ ವಾಪಸ್ ಪಡೆದಿಲ್ಲ. ಇದರಿಂದ ಎರಡನೇ ಹಂತದ ಚಳವಳಿಯನ್ನು ಇಡೀ ರಾಜ್ಯಾದ್ಯಂತ ಆರಂಭ ಮಾಡಲಿದ್ದು, ಜನವರಿ 9ರಂದು ಇಡೀ ಕರ್ನಾಟಕದ್ಯಾಂತ ರೈಲು ಸೇವೆ ಬಂದ್ ಆಗಲಿದೆ ಎಂದರು.
PublicNext
22/12/2020 07:18 pm