ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಯಚೂರು: ವೋಟ್‌ಗೆ ಖಡಕ್ ನೋಟು

ರಾಯಚೂರು: ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಖಡಕ್ ನೋಟು ಸದ್ದು ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಾಯಚೂರು ಜಿಲ್ಲೆಯ ‌ದೇವದುರ್ಗ ತಾಲ್ಲೂಕಿನ ಅರಕೇರಾ ಗ್ರಾಮದ ಮತಗಟ್ಟೆ ಬಳಿಯಲ್ಲೇ ಮತದಾರರಿಗೆ 500 ಮುಖಬೆಲೆ ನೋಟುಗಳನ್ನು ಹಂಚಲಾಗಿದೆ. ಈ ದೃಶ್ಯವನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ತಾಲ್ಲೂಕು ಕೇಂದ್ರವಾಗಿ ಘೋಷಣೆ ಆಗಿರುವ ಅರಕೇರಾದಲ್ಲಿ 20 ಗ್ರಾಮ ಪಂಚಾಯಿತಿ ‌ಸ್ಥಾನಗಳಿಗೆ ಸ್ಪರ್ಧೆ ಏರ್ಪಟ್ಟಿದೆ. ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯತಿ ಕೇಂದ್ರವು ಪಟ್ಟಣ ಪಂಚಾಯಿತಿಯಾಗಿ ಬದಲಾಗಲಿದೆ. ಮತಗಟ್ಟೆ ಬಳಿ ಸಾಕಷ್ಟು ಪೊಲೀಸರನ್ನು ನಿಯೋಜಿಸಿದ್ದರೂ ಹಣ ಹಂಚಿಕೆ ಆಗಿದೆ.

Edited By : Vijay Kumar
PublicNext

PublicNext

22/12/2020 05:52 pm

Cinque Terre

73.33 K

Cinque Terre

2