ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಹಿಂಡಲಗಾ ಜೈಲಿನಿಂದಲೇ ಗ್ರಾ.ಪಂ ಚುನಾವಣೆಗೆ ಕೊಲೆ ಕೇಸ್‌ ಆರೋಪಿ ಸ್ಪರ್ಧೆ

ಬೆಳಗಾವಿ: ಕೊಲೆ ಪ್ರಕರಣದ ಸಂಬಂಧ ಬೆಳಗಾವಿಯ ಹಿಂಡಲಗಾ ಜೈಲಲ್ಲಿರುವ ಆರೋಪಿಯೊಬ್ಬ ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿ ಗಮನ ಸೆಳೆದಿದ್ದಾರೆ.

ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮ ನಿವಾಸಿ ಹಾಗೂ ಶ್ರೀರಾಮ ಸೇನೆ ಹಿಂದೂಸ್ತಾನ್ ಸಂಘಟನೆ ಮುಖಂಡ ಪರಶರಾಮ ಭರಮಾ ಪಾಖರೆ (37) ಜೈಲಿನಿಂದಲೇ ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ಪರಶುರಾಮ ಅವರು ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮದ ಒಂದನೇ ವಾರ್ಡ್​​ನಿಂದ ಕಣಕ್ಕಿಳಿದಿದ್ದಾರೆ.

ಮುಚ್ಚಂಡಿ ಗ್ರಾಮದ ಮಹೇಶ ಅವ್ವಾನೆ ಎಂಬಾತನ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಪರಶರಾಮ ವಿರುದ್ಧ ಕೇಳಿ ಬಂದಿದ್ದು, ಎರಡು ತಿಂಗಳ ಹಿಂದೆ ಬಂಧಿತರಾಗಿದ್ದರು. ಈ ಹತ್ಯೆ ಪ್ರಕರಣದಲ್ಲಿ ಪರುಶರಾಮ ನಾಲ್ಕನೇ ಆರೋಪಿ ಆಗಿದ್ದಾರೆ. ಆದರೆ ಸ್ನೇಹಿತರ ಒತ್ತಡಕ್ಕೆ ಮಣಿದು ಪರಶರಾಮ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಜೈಲಿನಲ್ಲಿ ನಾಮಪತ್ರಕ್ಕೆ ಸಹಿ ಮಾಡಿಸಿಕೊಂಡು ಸ್ನೇಹಿತರೇ ಪರಶರಾಮ ಪರ ನಾಮಪತ್ರ ಸಲ್ಲಿಸಿದ್ದರು. ಅವರು ಆಟೋ ವಾಹನವನ್ನು ಇವರಿಗೆ ಚಿಹ್ನೆಯಾಗಿ ನೀಡಲಾಗಿದೆ.

Edited By : Vijay Kumar
PublicNext

PublicNext

22/12/2020 12:38 pm

Cinque Terre

88.97 K

Cinque Terre

3

ಸಂಬಂಧಿತ ಸುದ್ದಿ