ಬೆಂಗಳೂರು: ಜೆಡಿಎಸ್ ಪಕ್ಷ ಆಗಾಗ ನಮ್ಮ ಹತ್ತಿರ ಬರುತ್ತೆ. ಮತ್ತೆ ವಾಪಸ್ ಹೋಗುತ್ತೆ ಎಂದು ಬಿಜೆಪಿಗೆ ಜೆಡಿಎಸ್ ಬೆಂಬಲದ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಪದಾಧಿಕಾರಿಗಳ ಸಭೆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮಗೂ ಕಾಂಗ್ರೆಸ್ಸಿಗೂ ಎಂದೆಂದೂ ಆಗಲ್ಲ. ಶತ್ರುವಿನ ಶತ್ರು ಮಿತ್ರ ಅನ್ನೋದು ರಾಜಕೀಯದಲ್ಲಿ ಸಾಮಾನ್ಯ. ಅದಕ್ಕೆ ಬೇಕಾದ ತಂತ್ರಗಾರಿಕೆ ನಾವು ಆಗಾಗ ಮಾಡಿಯೇ ಮಾಡುತ್ತೇವೆ. ಮೊದಲು ಜೆಡಿಎಸ್ಅನ್ನು ಬಿಜೆಪಿ ಬೀ ಟೀಂ ಅಂತಿದ್ದ ಕಾಂಗ್ರೆಸ್ ಆಮೇಲೆ ಅವರೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ಮಾಡಲಿಲ್ವಾ? ಅವರಿಗೆ ನಾಚಿಕೆ ಇದೆಯಾ? ಜೆಡಿಎಸ್ ಪಕ್ಷ ಆಗಾಗ ನಮಗೆ ಹತ್ತಿರ ಬರುತ್ತದೆ, ದೂರ ಹೋಗುತ್ತದೆ ಎಂದು ಬಿಜೆಪಿಗೆ ಜೆಡಿಎಸ್ ಸಂಬಂಧದ ಕುರಿತು ಹೇಳಿದರು.
PublicNext
21/12/2020 03:27 pm