ಕೋಲ್ಕತ್ತಾ: ಪಶ್ಚಿಮ ಬಂಗಾಳದ ಅಧಿಕಾರದ ಗದ್ದುಗೆ ಏರಲು ಬಿಜೆಪಿ ಭರ್ಜರಿ ಸಿದ್ಧತೆ ನಡೆಸಿದೆ. ಈ ಮಧ್ಯೆ ರಾಜಕೀಯ ಚಾಣಾಕ್ಷ ಪ್ರಶಾಂತ್ ಕಿಶೋರ್ ಬಿಜೆಪಿಗೆ ಸವಾಲು ಹಾಕಿದ್ದಾರೆ.
ಟಿಎಂಸಿ ಕೆಲ ಶಾಸಕರು ಕಳೆದ ವಾರಾಂತ್ಯದಲ್ಲಿ ಬಿಜೆಪಿ ಸೇರುವುದರೊಂದಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪಾಲಿಗೆ ಸಂಕಷ್ಟ ತಂದಿದ್ದರು. ಇತ್ತ ಬಿಜೆಪಿಗೆ ಇನ್ನೂ ಪಕ್ಷಾಂತರವಾಗದ ಅನೇಕ ಟಿಎಂಸಿ ಶಾಸಕರು ಪಕ್ಷದ ಚುನಾವಣಾ ತಂತ್ರಜ್ಞರಾಗಿ ಪ್ರಶಾಂತ್ ಕಿಶೋರ್ ಅವರನ್ನು ನೇಮಕ ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇತ್ತ ಬಿಜೆಪಿಯು ಪ್ರಶಾಂತ್ ಕಿಶೋರ್ ಹೊರತಾಗಿಯೂ, ಪಶ್ಚಿಮ ಬಂಗಾಳದಲ್ಲಿ 200 ಸ್ಥಾನಗಳನ್ನು ಪಡೆಯುವುದಾಗಿ ಬಿಜೆಪಿ ಹೇಳಿಕೊಂಡಿದೆ. ಈ ಸಂಬಂಧ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿರುವ ಪ್ರಶಾಂತ್ ಕಿಶೋರ್, ''ಕೆಲ ಮಾಧ್ಯಮಗಳ ಬೆಂಬಲದಿಂದ ಈ ರೀತಿಯ ಹೈಪ್ ಸೃಷ್ಟಿಸಲಾಗುತ್ತಿದೆ. ವಾಸ್ತವವಾಗಿ ಪಶ್ಟಿಮ ಬಂಗಾಳದಲ್ಲಿ ಬಿಜೆಪಿ ಎರಡಂಕಿ ದಾಟುವುದು ಕಷ್ಟಕರವಾಗಲಿದೆ'' ಎಂದು ಹೇಳಿದ್ದಾರೆ.
PublicNext
21/12/2020 01:58 pm