ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗ್ರಾ.ಪಂ.ಚುನಾವಣೆ : ಚುನಾವಣೆ ಮುನ್ನ ಗಮನ ಸೆಳೆದ ಗಂಗಮ್ಮ ಗೆದ್ದರೇ ಓಕೆ, ಸೋತರೇ?

ಬೆಂಗಳೂರು: ಎರಡು ಹಂತದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಯುತ್ತಿದೆ.

ಎಲ್ಲ ಗ್ರಾಮಗಳಲ್ಲಿ ತುರುಸಿನ ಪ್ರಚಾರ ನಡೆಯುತ್ತಿದೆ. ಮತ್ತೊಂದೆಡೆ ಭರವಸೆಗಳ ಮಹಾಪೂರವೇ ಹರಿದು ಬರುತ್ತಿದೆ.

ಇದರ ಮಧ್ಯೆ ಚುನಾವಣೆ ಮುನ್ನವೇ ತುಮಕೂರು ಜಿಲ್ಲೆ ಹೆಬ್ಬೂರು ಗ್ರಾಮಪಂಚಾಯಿತಿ ಕಲ್ಕೆರೆ ಗ್ರಾಮದ ಅಭ್ಯರ್ಥಿಯೊಬ್ಬರು ಮತದಾರರಲ್ಲಿ ಮಾಡಿರುವ ಮನವಿ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಮಹಿಳಾ ಅಭ್ಯರ್ಥಿ ಎಚ್.ಗಂಗಮ್ಮ, ಕಲ್ಕೆರೆಯಲ್ಲಿ ಇಬ್ಬರು ಪುರುಷರು ಮತ್ತು ದೊಡ್ಡಗುಣಿಯಲ್ಲಿ ಐವರು ಪುರುಷ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿದ್ದಾರೆ.

ಗೆದ್ದರೆ ತಾವು ಮಾಡುವ ಕೆಲಸಗಳ ಬಗ್ಗೆ ಪಟ್ಟಿ ಮಾಡಿದ್ದಾರೆ, ತಿಮ್ಮರಾಯಸ್ವಾಮಿ ದೇವಾಸ್ಥಾನದ ದೇವಾದಾಯ ಇನಾಮ್ ಜಮೀನನ್ನು ಮೂಲ ಖಾತೆಯಂತೆ ದೇವರ ಹೆಸರಿಗೆ ಖಾತೆ ಮಾಡಿಸುವುದು, ಅರಳಿಕಟ್ಟೆ ಕಟ್ಟಿಸುವುದು, ನಕ್ಷೆಯಂತೆ ರಸ್ತೆ ಮಾಡಿಸುವುದು, ಮಳೆ ನೀರು ಸರಾಗವಾಗಿ ಹರಿಯುವಂತೆ ಚರಂಡಿ ಮಾಡಿಸುವ ಭರವಸೆ ನೀಡಿದ್ದಾರೆ.

ಸೋತರೆ ಮಾಡುವ ಕೆಲಸಗಳು ಇಂತಿವೆ, ಅನರ್ಹವಾಗಿ ಪಡೆದಿರುವ 25 ಕುಟುಂಬಗಳ ಪಡಿತರ ಚೀಟಿ ರೇಷನ್ ಕಾರ್ಡ್ ರದ್ದು ಮಾಡುವುದು, ಸರ್ಕಾರಕ್ಕೆ ಸುಳ್ಳು ಮಾಹಿತಿ ಕೊಟ್ಟು ಹಣ ಪಡೆಯುತ್ತಿರುವ 40 ಕುಟುಂಬಗಳ ವೇತನ ಯೋಜನೆ ಹಣ ಕಟ್, ಸರ್ವೆ ನಂ 86 ರಲ್ಲಿ ಹಳೇ ದಾಖಲೆಯಂತೆ ಸ್ಮಶಾನ ನಿರ್ಮಿಸುವುದು, 11 ಕುಟುಂಬಗಳು ಒತ್ತುವರಿ ಮಾಡಿರುವ ಜಾಗವನ್ನು ತೆರವುಗೊಳಿಸುವುದಾಗಿ ಪಟ್ಟಿ ಮಾಡಿದ್ದಾರೆ.

ಗಂಗಮ್ಮ ನೀಡಿರುವ ಭರವಸೆ ನೋಡಿ ಹಲವರು ಆಕೆ ಗೆಲ್ಲುವುದಕ್ಕಿಂತ ಸೋಲಲಿ ಎಂದು ಬಯಸಿದ್ದಾರೆ.

ಮೊದಲ ಹಂತದ ಮತದಾನ ಮಂಗಳವಾರ ನಡೆಯಲಿದೆ.

Edited By : Nirmala Aralikatti
PublicNext

PublicNext

21/12/2020 12:40 pm

Cinque Terre

58.63 K

Cinque Terre

2

ಸಂಬಂಧಿತ ಸುದ್ದಿ