ಹುಬ್ಬಳ್ಳಿ: ಗೋಹತ್ಯೆ ನಿಷೇಧಕ್ಕೆ ನಮ್ಮ ಬೆಂಬಲ ಇದೆ. ಮುಸ್ಲಿಮರಿಗೆ ನಾನು ಕೈ ಮುಗಿದು ಬೇಡಿಕೊಳ್ಳುತ್ತೇನೆ. ಗೋ ಮಾಂಸವನ್ನು ಯಾರೂ ತಿನ್ನಬಾರದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.
ನಗರದಲ್ಲಿ ಶನಿವಾರ ಮಾತನಾಡಿದ ಅವರು, ಗೋ ಮಾಂಸ ನಿಷೇಧ ಕಾಯ್ದೆಯಿಂದ ಬಂಜೆಯಾದ ಗೋವು ನೋಡಿಕೊಳ್ಳುವವರು ಯಾರು ಎನ್ನುವ ಪ್ರಶ್ನೆ ಕೇಳಿಬರುತ್ತದೆ. ಅದಕ್ಕಾಗಿ ಪ್ರತಿ ಪಂಚಾಯತ್‌ಗೆ ಒಂದು ಗೋಶಾಲೆ ತೆರೆಯಿರಿ. ರೈತರು, ಚರ್ಮಕಾರಿಗಳು ಏನು ಮಾಡಬೇಕು? ಎಂದು ಪ್ರಶ್ನಿಸಿದ ಅವರು ನಮ್ಮ ಸರ್ಕಾರದ ಕೆಲಸಗಳು ಇವಲ್ಲ, ಗೋ ಸಾಕಾಣಿಕೆಯ ವ್ಯವಸ್ಥೆ ನೀವು ಮಾಡಿಕೊಡಿ ಎಂದರು.
ಮೈತ್ರಿ ಸರ್ಕಾರ ಪತನಕ್ಕೆ ಯಾರು ಕಾರಣ ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ. ಅದರ ಬಗ್ಗೆ ನಾನು ಯಾಕೆ ವಿಶ್ಲೇಷಣೆ ಮಾಡಲಿ. ಮತ್ತೆ ಪುನರ್ ವಿವಾಹಕ್ಕೆ ಸಾಧ್ಯ ಇದೆಯಾ ಎನ್ನುವುದನ್ನು ನಾವು ನೋಡುತ್ತಿದ್ದೇವೆ. ನಾವೇನಿದ್ದರೂ ಸೇರಿಸುವುದಕ್ಕೆ ನೋಡುವವರು ಹೊರತು, ಮುರಿಯುವವರಲ್ಲ ಎಂದು ಹೇಳಿದರು.
ರಾಜಕೀಯ, ರೈಲ್ವೆ ಸ್ಟೇಷನ್ ಜಂಕ್ಷನ್ ಆದಂತಿದೆ. ಯಾರು ಹತ್ತಿ ಹೋಗುತ್ತಾರೆ, ದಡ ಸೇರುತ್ತಾರೆ ಎಂದು ತಿಳಿಸಿದರು. ಈ ವೇಳೆ ಲವ್ ಜಿಹಾದ್ ಕಾನೂನು ಕುರಿತು ಮಾತನಾಡಿದ ಅವರು, ಲವ್ ಜಿಹಾದ್ ಕಾನೂನು ತಂದು ಏನ್ ಮಾಡಲು ಸಾಧ್ಯ? ಇದು ಗಂಡ ಹೆಂಡತಿ ರಾಜೀ ಆದರೆ ಏನು ಮಾಡುವುದಕ್ಕೆ ಆಗುತ್ತದೆ. ಒತ್ತಾಯಪೂರ್ವಕವಾಗಿ ಮಾಡಿದರೆ ಕ್ರಮ ಕೈಗೊಳ್ಳಬಹುದು ಎಂದರು.
PublicNext
20/12/2020 08:02 pm