ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಈ ಬಾರಿ ಪಾಲುಗಾರಿಕೆಯ ಮೈತ್ರಿ ಆಗುತ್ತೆ: ಹೊರಟ್ಟಿ

ಹುಬ್ಬಳ್ಳಿ: ಕಾಂಗ್ರೆಸ್ಸಿನವರನ್ನು ಕಾಂಗ್ರೆಸ್ಸಿಗರೇ ಸೋಲಿಸಿದ್ದಾರೆ.ಇದರಲ್ಲಿ ಜೆಡಿಎಸ್ ಪಾತ್ರ ಇಲ್ಲ ಎನ್ನುವುದು ಸ್ಪಷ್ಟವಾಯಿತು‌ ಎಂದು ವಿ.ಪ. ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು,ವಿಪಕ್ಷದಲ್ಲಿದ್ದಾಗ ಸೋಲಿಸುವುದೇ ಧರ್ಮ ಎಂದ ಅವರು ಜೆ.ಡಿ.ಎಸ್ ಹಾಗೂ ಬಿಜೆಪಿ ಮೈತ್ರಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಮಾಮೂಲಿಯಾಗಿ ಮೈತ್ರಿ ಆಗುತ್ತದೆ.ಈ ಬಾರಿ ಮೈತ್ರಿ ಗಟ್ಟಿಯಾಗಿರುತ್ತೆ.

ಈ ಬಾರಿ ಪಾಲುಗಾರಿಕೆಯ ಮೈತ್ರಿ ಆಗುತ್ತೆ ಎಂದರು.

ಮೈತ್ರಿ ಮುರಿದರೆ ಏನಾಗುತ್ತೆ ಅಂತ ಬಿಜೆಪಿ ಅವರಿಗೂ ಗೊತ್ತಾಗಿದೆ‌.ಈ ಬಾರಿ ಮೈತ್ರಿ ಮುರಿಯಲಿಕ್ಕಿಲ್ಲ ಎಂದು ಭರವಸೆ ವ್ಯಕ್ತಪಡಿಸಿದರು.

ಇನ್ನೂ ದೇವೆಗೌಡ ಅವರ ಕುರಿತು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು,ನಿಮ್ಮಷ್ಟಕ್ಕೆ ನೀವಿರಿ ಅಂತ ದೇವೇಗೌಡರಿಗೆ ಹೇಳಿದ್ದೇವೆ.ಅವರ ಆಲೋಚನೆಗಳು ಈಗ ನಡೆಯಲ್ಲ.ಅವರ ರಾಜಕಾರಣವೇ ಬೇರೆ.

ಅವರು ಹೇಳುವುದನ್ನು ಹೇಳುತ್ತಾರೆ. ಕೇಳುವುದು ಬಿಡುವುದು ನಮಗೆ ಬಿಟ್ಟದ್ದು.ಅದೇ ರೀತಿ ಅವರು ಹೇಳುವುದನ್ನು ಹೇಳಿದ್ದಾರೆ. ನಾವು ಮಾಡುವುದನ್ನು ಮಾಡುತ್ತೇವೆ. ಬಿಜೆಪಿಯಲ್ಲಿ ಜೆಡಿಎಸ್ ವಿಲೀನ ಆಗೋದಿಲ್ಲ ಕೇವಲ ಮೈತ್ರಿ ಅಷ್ಟೇ ಎಂದರು.

Edited By :
PublicNext

PublicNext

19/12/2020 05:18 pm

Cinque Terre

105.53 K

Cinque Terre

5

ಸಂಬಂಧಿತ ಸುದ್ದಿ