ಹುಬ್ಬಳ್ಳಿ- ಮೈತ್ರಿ ಸರ್ಕಾರ ಪತನಕ್ಕೆ ಯಾರು ಕಾರಣ ಅನ್ನೋದು, ರಾಜ್ಯದ ಜನರಿಗೆ ಗೊತ್ತಿದೆ. ಅದರ ಬಗ್ಗೆ ನಾನು ಯಾಕೆ ವಿಶ್ಲೇಷಣೆ ಮಾಡಲಿ ಮತ್ತೆ ಪುನರ್ವಿವಾಹಕ್ಕೆ ಸಾಧ್ಯ ಇದೆಯಾ ಅನ್ನೋದನ್ನು ನಾವು ನೋಡ್ತಾ ಇದಿವಿ.
ನಾವೇನಿದ್ದರೂ ಸೇರಿಸುವುದಕ್ಕೆ ನೊಡುವವರು ಹೊರತು, ಮುರಿಯುವವರಲ್ಲ ನಮ್ಮ ಪ್ರಯತ್ನ ಎಷ್ಟು ಸಫಲ ಆಗುತ್ತದೆ ಕಾದು ನೋಡೋಣ ಎಂದು, ಕಾಂಗ್ರೆಸ್ ಹಿರಿಯ ಮುಖಂಡ ಸಿಎಮ್ ಇಬ್ರಾಹಿಂ ಹೇಳಿದರು..
ನಗರದಲ್ಲಿಂದ ಮಾಧ್ಯಮ ಮೂಲಕ ಮಾತನಾಡಿದ ಅವರು ರಾಜ್ಯದಲ್ಲಿ ರಾಜಕೀಯ ರೈಲ್ವೆ ಸ್ಟೇಷನ್ ಜಂಕ್ಷನ್ ಆದಂತಿದೆ ಯಾರು ಹತ್ತಿ ಹೋಗುತ್ತಾರೆ. ಅವರು ದಡ ಸೇರಬೇಕು,ಹೀಗಾಗಿ ಕೆಲವರು ಬಿಜೆಪಿ ಹೋಗಿದ್ದಾರೆ. ನಾವು ಅದರಿಂದ ಸಫರ್ ಆಗಿದ್ದೇವೆ, ಕೆಲವೊಂದು ಕಾನೂನುಗಳನ್ನು ಮೋದಿ ತರುತ್ತಿದ್ದಾರೆ ಲವ್ ಜಿಹಾದ್ ಗಂಡ ಹೆಂಡತಿ ರಾಜಿ ಆದ್ರೆ ಏನು ಮಾಡಲು ಆಗುತ್ತದೆ.
ಒತ್ತಾಯಪೂರ್ವಕವಾಗಿ ಮಾಡಿದ್ರೆ ಕ್ರಮ ಕೈಗೊಳ್ಳಲಿ ರಾಜ್ಯ ಸರ್ಕಾರ ಇಂತಹದ್ದರ ಬಗ್ಗೆ ಚಿಂತನೆ ಮಾಡುವುದು ಸರಿಯಲ್ಲ ಅವರವರ ಇಚ್ಛೆಗೆ ತಕ್ಕಂತೆ ನಡೆದುಕೊಳ್ಳುತ್ತಾರೆ. ಯಾರು ಯಾರ ಜೊತೆ ಹೋಗುತ್ತಾರೆ ಅನ್ನೋದನ್ನು ನೋಡುತ್ತ ಕುಳಿತುಕೊಳ್ಳುವುದು ಸಿಎಂ ಕೆಲಸವೇ? ಎಂದು ಪ್ರಶ್ನಿಸಿದರು.
ಇನ್ನೂ ಗೋಹತ್ಯೆ ನಿಷೇಧಕ್ಕೆ ನಮ್ಮ ಬೆಂಬಲ ಇದೆ,ಮುಸ್ಲಿಂರಿಗೆ ನಾನು ಕೈ ಮುಗಿದು ಬೇಡಿಕೊಳ್ಳುತ್ತೇನೆ, ಗೋವು ಯಾರು ತಿನ್ನಬಾರದು ಆದರೆ, ಬಂಜೆಯಾದ ಗೋವು ನೋಡಿಕೊಳ್ಳುವವರು ಯಾರು?ಅದಕ್ಕಾಗಿ ಪ್ರತಿ ಪಂಚಾಯತ್ ಗೆ ಒಂದು ಗೋಶಾಲೆ ತೆರೆಯಿರಿ ರೈತರು, ಚರ್ಮಕಾರಿಗಳು ಏನು ಮಾಡಬೇಕು?ನಮ್ಮ ಸರ್ಕಾರದ ಕೆಲಸಗಳು ಇವಲ್ಲ, ಗೋಸಾಕಾಣಿಕೆಯ ವ್ಯವಸ್ಥೆ ನೀವು ಮಾಡಿಕೊಡಿ,ಕೊಡವರು ಗೋಮಾಂಸ ಸೇವನೆ; ಸಿದ್ದರಾಮಯ್ಯ ಆರೋಪ ವಿಚಾರಕ್ಕೆ ಮಾತನಾಡಿ ಅದು ನನಗೆ ಗೊತ್ತಿಲ್ಲ, ಯಾವುದೇ ವಿವಾದದ ಬಗ್ಗೆ ನಾನು ಮಾತನಾಡುವುದಿಲ್ಲ. ಮುಂದೆ ರಾಜ್ಯಕ್ಕೆ ಒಳ್ಳೆಯದ್ದು ಆಗುತ್ತದೆ ಹೊರಟ್ಟಿ ಅವರು ಅಧ್ಯಕ್ಷರಾಗುತ್ತಾರೆ. ಮುಖ್ಯಮಂತ್ರಿಯೂ ಆಗುತ್ತಾರೆ ನಾ ಸುಮ್ಮನೆ ಹೇಳುವುದಿಲ್ಲ ಎಲ್ಲದಕ್ಕೂ ಕಾರಣ ಇರುತ್ತದೆ, ಕಾದು ನೋಡಿ ಎಂದರು....
PublicNext
19/12/2020 04:29 pm