ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಂಚಾಯಿತಿ ಫೈಟ್ : ಗುಳೆ ಹೋದವರನ್ನು ಕರೆ ತರಲು ಭಾರಿ ಕಸರತ್ತು

ಅಳವಂಡಿ : ಗ್ರಾಮ ಪಂಚಾಯತಿ ಚುನಾವಣೆ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ.

ಸ್ಪರ್ಧಿ, ಪ್ರತಿಸ್ಪರ್ಧಿಗಳು ಗೆಲುವಿಗಾಗಿ ಹರಸಾಹಸಪಡುತ್ತಿದ್ದಾರೆ. ಸದ್ಯ ಗುಳೆ ಹೋದವರನ್ನು ಕರೆತರಲು ಮುಂದಾಗಿದ್ದಾರೆ.

ಪ್ರತಿಯೊಂದು ಗ್ರಾಮದಿಂದ ಕುಟುಂಬದ ಒಬ್ಬ ಸದಸ್ಯ ಅಥವಾ ಕುಟುಂಬದ ಬಹುತೇಕ ಸದಸ್ಯರು, ಕೂಲಿ ಅರಸಿ, ಗುಳೆ ಹೋಗುವುದು ಸಾಮಾನ್ಯವಾಗಿದೆ.

ಹೀಗಾಗಿ ಅಭ್ಯರ್ಥಿಗಳ ಚಿತ್ತ ಈಗ ಗುಳೆ ಹೋದವರು ಹಾಗೂ ಹೊರಗಡೆ ನೌಕರಿ ಮಾಡುವವರತ್ತ ಹರಿದಿದೆ.

ಮತಪತ್ರ ಹಿಡಿದುಕೊಂಡು, ತಮ್ಮ ವಾರ್ಡಿನಲ್ಲಿನ ಮತದಾರರು ಯಾವ ನಗರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಅಲ್ಲದೆ ಅವರ ಸಂಬಂಧಿಕರ ಹತ್ತಿರ ಮೊಬೈಲ್ ನಂಬರ್ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ. ಮತದಾರರನ್ನು ಕರೆ ತರುವ ಹಾಗೂ ಬರಲು ಅವರಿಗೆ ಮನವಿ ಮಾಡುತ್ತಿದ್ದಾರೆ.

ಉದ್ಯೋಗ ಅರಸಿ ಬೆಂಗಳೂರು, ಪುಣೆ, ಮುಂಬಯಿ, ಗೋವಾ, ಚಿಕ್ಕಮಗಳೂರು, ರತ್ನಾಗಿರಿ, ಹುಬ್ಬಳ್ಳಿಗೆ ತೆರಳಿದ್ದಾರೆ. ಅವರನ್ನು ಸಂಪರ್ಕಿಸಿ, ಗ್ರಾಮಕ್ಕೆ ಮತದಾನ ಮಾಡಲು ಕರೆ ತರಲು ಮುಂದಾಗಿದ್ದಾರೆ.

ಅಲ್ಲದೆ ಪ್ರಯಾಣ ವೆಚ್ಚ ನೀಡುವ ಭರವಸೆ ನೀಡುತ್ತಿದ್ದಾರೆ.

ಒಟ್ಟಾರೆ ಗ್ರಾಮೀಣ ಪ್ರದೇಶದಲ್ಲಿ ಚುನಾವಣೆ ಕಾವು ಪಡೆದುಕೊಂಡಿದ್ದು, ಗೆಲುವಿನ ಲೆಕ್ಕಾಚಾರ ನಡೆದಿದೆ.

Edited By : Nirmala Aralikatti
PublicNext

PublicNext

18/12/2020 02:45 pm

Cinque Terre

95.32 K

Cinque Terre

4