ಹೊಸದಿಲ್ಲಿ: ಕೇಂದ್ರ ಸರ್ಕಾರ ಜಾರಿ ಮಾಡಿರುವ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿ ವಿಧಾನಸಭೆಯಲ್ಲಿ ಕೃಷಿ ಕಾನೂನುಗಳ ಪ್ರತಿಯನ್ನು ಹರಿದು ಹಾಕಿದ್ದಾರೆ.
ಕೃಷಿ ಕಾನೂನುಗಳ ಜಾರಿ ವಿರೋಧಿಸಿ ದೆಹಲಿ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಾತನಾಡುತ್ತಿದ್ದ ಅರವಿಂದ್ ಕೇಜ್ರಿವಾಲ್, ಕೃಷಿ ಕಾನೂನುಗಳ ಪ್ರತಿಯನ್ನು ಹರಿದು ಹಾಕಿದರು.
ಇದೇ ವೇಳೆ ಕೊರೊನಾ ವೈರಸ್ ಹಾವಳಿಯ ಕಾಲದಲ್ಲಿ ಕೃಷಿ ಕಾನೂನುಗಳಿಗೆ ಅಂಕಿತ ಪಡೆಯಲು ಆತುರವೇಕೆ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿರುವ ಅರವಿಂದ್ ಕೇಜ್ರಿವಾಲ್, ಸಂಸತ್ತಿನಲ್ಲಿ ಈ ಮಸೂದೆಯನ್ನು ಮತ್ತೊಮ್ಮೆ ಮಂಡಿಸಿ ಸೂಕ್ತ ಚರ್ಚೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
PublicNext
17/12/2020 06:02 pm