ದಾವಣಗೆರೆ: ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಮೇಲೆ ಮಂಗವೊಂದು ದಾಳಿ ನಡೆಸಲು ಮುಂದಾದ ಘಟನೆ ಬುಧವಾರ ನಡೆದಿದ್ದು, ಅದೃಷ್ಟವಶಾತ್ ಶಾಸಕರು ದಾಳಿಯಿಂದ ಪಾರಾಗಿದ್ದಾರೆ.
ಹೊನ್ನಾಳಿ ತಾಲೂಕು ಕಚೇರಿ ಎದುರು ಮಂಗವೊಂದು ಶಾಸಕರ ಮೇಲೆ ದಾಳಿ ಮಾಡಲು ಮುಂದಾಗಿತ್ತು. ಅಷ್ಟರಲ್ಲಿ ಎಚ್ಚೆತ್ತುಕೊಂಡ ರೇಣುಕಾಚಾರ್ಯ ಅವರ ಸಹಚರರು, ಶಾಸಕರನ್ನು ದಾಳಿಯಿಂದ ರಕ್ಷಿಸಿದ್ದಾರೆ. ಮಂಗವು ಕಳೆದ ಕೆಲ ದಿನಗಳಿಂದ ಹೊನ್ನಾಳಿಯ ಸುಮಾರು 20ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದೆ.
ಹೊನ್ನಾಳಿ ಬಸ್ ನಿಲ್ದಾಣ, ಪುರಸಭೆ, ದುರ್ಗಿಗುಡಿ, ಟಿ.ಬಿ.ಸರ್ಕಲ್ ಪ್ರದೇಶದಲ್ಲಿ ಮಂಗವು ನಿತ್ಯ ಸಂಚರಿಸುತ್ತದೆ. ಕೋತಿಯನ್ನು ಕಂಡರೆ ಜನರು ಭೀತಿಯಿಂದ ಓಡಿ ಹೋಗುತ್ತಾರೆ. ಶಾಸಕರ ಮೇಲೆ ಮಂಗ ದಾಳಿ ಮಾಡಲು ಮುಂದಾದ ಹಿನ್ನೆಲೆಯಲ್ಲಿ ಎಚ್ಚೆತ್ತ ಅರಣ್ಯ ಇಲಾಖೆ ಕಿರಿಕ್ ಮಂಗವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
PublicNext
16/12/2020 03:20 pm