ಮೈಸೂರು: ಗೋ ಹತ್ಯೆ ನಿಷೇಧ ಮಾಡಿ ಆ ಮೂಲಕ ಗೋಮಾಂಸ ರಫ್ತು ಪ್ರಮಾಣ ಹೆಚ್ಚಳ ಮಾಡುವ ಹುನ್ನಾರ ನಡೆದಿದೆ ಎಂದು ಸಾಹಿತಿ ಪ್ರೊ. ಕೆ ಎಸ್ ಭಗವಾನ್ ಆರೋಪಿಸಿದ್ದಾರೆ
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಮ್ಮ ದೇಶದಿಂದ ಗೋಮಾಂಸ ರಫ್ತು ಮಾಡುವವರಲ್ಲಿ ಮೇಲ್ವರ್ಗದವರು, ಬ್ರಾಹ್ಮಣರೇ ಹೆಚ್ಚು ಇದ್ದಾರೆ ಎಂಬುದನ್ನು ಮಾಧ್ಯಮಗಳ ಮೂಲಕ ತಿಳಿದಿದ್ದೇನೆ. ಇದರ ಹಿಂದೆ ಗೋಹತ್ಯೆ ನಿಲ್ಲಿಸಿ ಹೊರ ದೇಶಗಳಿಗೆ ರಫ್ತು ಪ್ರಮಾಣ ಹೆಚ್ಚಿಸುವ ಹುನ್ನಾರ ಅಡಗಿದೆ. ಇದು ಸರಿಯಾದ ಕ್ರಮ ಅಲ್ಲ’ ಎಂದರು.
ರೈತರು ಅನುಪಯುಕ್ತವಾದ ದನ, ಎಮ್ಮೆ, ಇತರ ಜಾನುವಾರುಗಳನ್ನು ಇಟ್ಟುಕೊಳ್ಳಲು ಇಷ್ಟಪಡುವುದಿಲ್ಲ. ಏಕೆಂದರೆ ಅದು ಆರ್ಥಿಕವಾಗಿ ಹೊರೆಯಾಗುತ್ತದೆ. ಅದನ್ನು ಸಾಕುವುದು ಕಷ್ಟ. ಆದ್ದರಿಂದ ಅವುಗಳನ್ನು ಮಾರಾಟ ಮಾಡುವರು. ಜಾನುವಾರುಗಳ ಮೇಲೆ ಹಳ್ಳಿಯ ರೈತರು ಯಾವುದೇ ಭಾವುಕ ವಿಚಾರಗಳನ್ನು ಹೊಂದಿಲ್ಲ. ಇದನ್ನು ಸರ್ಕಾರ ಅರಿತುಕೊಳ್ಳಬೇಕು’ ಎಂದರು.
PublicNext
16/12/2020 10:00 am