ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಾಪ ಮುಂದೂಡಿದರು ನಿಲ್ಲದ ಕದನ : ಪರಿಷತ್ ನಲ್ಲಿ ಜನ ನಾಯಕರ ಜಂಗೀಕುಸ್ತಿ

ಬೆಂಗಳೂರು: ವಿಧಾನ ಪರಿಷತ್ ಇತಿಹಾಸದಲ್ಲಿಯೇ ಇದೆ ಮೊದಲ ಬಾರಿಗೆ ಅಧಿವೇಶನ ಅಂತ್ಯವಾದ ಬಳಿಕ ಮತ್ತೆ ಮರು ಅಧಿವೇಶನ ನಡೆಸಲು ಇಂದು ವಿಧಾನ ಪರಿಷತ್ ನಲ್ಲಿ ಕಲಾಪ ನಡೆಸಲು ತೀರ್ಮಾನಿಸಲಾಗಿತ್ತು.

ಆದರೆ ಕಲಾಪ ಆರಂಭವಾಗುತ್ತಿದ್ದಂತೆ ಅಧಿವೇಶನದಲ್ಲಿ ಜನನಾಯಕರು ಅನಾಗರೀಕರಂತೆ ಪರಸ್ಪರ ನೂಕಾಟ ತಳ್ಳಾಟ ಆರಂಭಿಸಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ಈ ನಡೆ ನಿಜಕ್ಕೂ ನಾಗರೀಕ ಸಮಾಜ ತಲೆ ತಗ್ಗಿಸುವಂತಿದೆ.

ವಿಧಾನ ಪರಿಷತ್ ಸಭಾಪತಿಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗಾಗಿ ಕರೆಯಲಾದ ಕಲಾಪವು ಹೊಡೆದಾಟ, ಎಳೆದಾಟ ಸಾಕ್ಷಿಯಾಯಿತು.

ವಿಧಾನ ಪರಿಷತ್ ಪೀಠ ಜನಪ್ರತಿನಿಧಿಗಳ ಜಂಗೀಕುಸ್ತಿಯ ಕಣವಾಗಿದ್ದು ನಿಜಕ್ಕೂ ನಾಚಿಕೆಯಾಗಬೇಕಾದಂತಹ ವಿಚಿತ್ರ ಘಟನೆ ಮಂಗಳವಾರ ನಡೆಯಿತು.

ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಪೀಠದಲ್ಲಿ ಉಪಸಭಾಪತಿ ಧರ್ಮೇಗೌಡ ಕುಳಿತುಕೊಂಡಿದ್ದಕ್ಕೆ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಸಭಾಪತಿ ಕುರ್ಚಿಗೆ ಮುತ್ತಿಗೆ ಹಾಕಿ ಧರ್ಮೇಗೌಡ ಅವರನ್ನು ಹೊರಹಾಕಲು ಯತ್ನಿಸಿದರು.

ಕಾಂಗ್ರೆಸ್ ನಾಯಕರು ಸಭಾಪತಿ ಪೀಠದ ಮೇಲಿದ್ದ ವಸ್ತುಗಳನ್ನು ಕಿತ್ತೆಸೆದರು.

ಆಗ ಸಭಾಪತಿ ಪೀಠದ ಮುಂಭಾಗದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಅಳವಡಿಸಿದ್ದ ಗಾಜಿನ ಕವಚನ್ನು ಎಳೆದು ಹಾಕಿದರು.

ಬಿಜೆಪಿಗೆ ಕಾಂಗ್ರೆಸ್ ಸದಸ್ಯರು ಧಿಕ್ಕಾರ ಕೂಗಿದರೆ, ಬಿಜೆಪಿ ಸದಸ್ಯರು ಸಭಾಪತಿ ವಿರುದ್ಧ ಘೋಷಣೆ ಕೂಗಿದರು.

ಆರಂಭದಲ್ಲಿ ಉಪಸಭಾಪತಿ ಧರ್ಮೇಗೌಡ ಅವರು ಕೂತಿದ್ದರು. ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರು ಪೀಠದ ಮೇಲೆ ಏಕಾಏಕಿ ಪ್ರವೇಶ ಮಾಡಿದ್ದರಿಂದ ಉಪಸಭಾಪತಿ ಧರ್ಮೇಗೌಡ ಅವರನ್ನು ಕಾಂಗ್ರೆಸ್ ಸದಸ್ಯರು ಪೀಠದಿಂದ ಇಳಿಸಿ, ಚಂದ್ರಶೇಖರ್ ಪಾಟೀಲ್ ಅವರನ್ನು ಕೂರಿಸಿ, ಪ್ರತಿಪಕ್ಷದ ಮುಖ್ಯ ಸಚೇತಕ ನಾರಾಯಣಸ್ವಾಮಿ, ಸದಸ್ಯ ಎಸ್.ರವಿ ಪೀಠದ ಎರಡು ಭಾಗದಲ್ಲಿ ನಿಂತು ಯಾರು ಪ್ರವೇಶಿಸದಂತೆ ತಡೆದರು.

ಗಲಾಟೆ ಹೆಚ್ಚಾಗುತ್ತಿದ್ದಂತೆ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಿಕೆ ಮಾಡಿದ್ದಾರೆ.

ಪೀಠಕ್ಕೆ ಆಗಮಿಸಿ ಮುಂದೂಡಿಕೆ ಘೋಷಣೆ ಮಾಡಿ ಮಾರ್ಷಲ್ ಗಳ ಬೆಂಬಲದೊಂದಿಗೆ ಹೊರ ನಡೆದರು.

ಆದರೂ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ಕೂಗಾಡ, ದೂಡಾಟ, ಕಿತ್ತಾಟ ನಿಲ್ಲುತ್ತಿಲ್ಲ.

Edited By : Nirmala Aralikatti
PublicNext

PublicNext

15/12/2020 12:18 pm

Cinque Terre

54.62 K

Cinque Terre

0

ಸಂಬಂಧಿತ ಸುದ್ದಿ