ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಮ್ಮನನ್ನು ಬಿಜೆಪಿಗೆ ಆಹ್ವಾನಿಸಿದ ಅಣ್ಣ..!

ಶಿವಮೊಗ್ಗ: ಸೊರಬ ಶಾಸಕ ಕುಮಾರ ಬಂಗಾರಪ್ಪ ಅವರು ಸಹೋದರ, ಜೆಡಿಎಸ್‌ನ ಮುಖಂಡ ಮಧು ಬಂಗಾರಪ್ಪ ಅವರನ್ನು ಬಿಜೆಪಿಗೆ ಆಹ್ವಾನಿಸಿದ್ದಾರೆ.

ಸೊರಬದಲ್ಲಿ ಬಿಜೆಪಿಯ ಗ್ರಾಮ ಸ್ವರಾಜ್ಯ ಅಭಿಯಾನ ಉದ್ಘಾಟಿಸಿ ಮಾತನಾಡಿದ ಅವರು, ನಾನು ಹಾಗೂ ಮಧುಬಂಗಾರಪ್ಪ ಒಂದಾಗಿ ಕಾಂಗ್ರೆಸ್‌ ಸೇರಲಿದ್ದಾರೆ ಎಂಬ ಸುಳ್ಳುಸುದ್ದಿ ಹರಿದಾಡುತ್ತಿದೆ. ಸಂಸಾರದಲ್ಲಿ ಅಣ್ಣ-ತಮ್ಮಂದಿರು ಒಂದಾಗಬೇಕೆಂಬ ಮಾತು ಸರ. ಆದರೆ ರಾಜಕೀಯವಾಗಿ ಇದು ಸಲ್ಲದು. ನಾನು ಬಿಜೆಪಿಯ ಕಟ್ಟಾಳು, ಅಸ್ತಿತ್ವದಲ್ಲೇ ಇಲ್ಲದ ಮಧು ಬಂಗಾರಪ್ಪ ಬಿಜೆಪಿಗೆ ಸೇರಿ ಶಕ್ತಿ ತುಂಬಿಕೊಳ್ಳುವುದಾದರೇ ತುಂಬಿಕೊಳ್ಳಲಿ ಎಂದು ಲೇವಡಿ ಮಾಡಿದರು.

ತಾಲೂಕಿನಲ್ಲಿ ಕಾಂಗ್ರೆಸ್‌-ಜೆಡಿಎಸ್ ಪಕ್ಷಗಳಿಗೆ ಅಸ್ತಿತ್ವವೇ ಇಲ್ಲದಂತಾಗಿದೆ. ಹಿಂದಿನ ಶಾಸಕರ ಅವಧಿ ಭ್ರಷ್ಟಾಚಾರದಲ್ಲೇ ಮುಳುಗಿ ಹೋಗಿದೆ. ಮಾಜಿ ಶಾಸಕರು ಆಗೊಮ್ಮೆ, ಈಗೊಮ್ಮೆ ತಾಲೂಕಿಗೆ ಬಂದು ಸುದ್ದಿಗೋಷ್ಠಿ ನಡೆಸಿ ಹೋಗುತ್ತಾರೆ ಅಷ್ಟೇ ಎಂದು ಕುಟುಕಿದರು.

Edited By : Vijay Kumar
PublicNext

PublicNext

14/12/2020 05:06 pm

Cinque Terre

51.88 K

Cinque Terre

3

ಸಂಬಂಧಿತ ಸುದ್ದಿ