ಬೆಂಗಳೂರು: ಸಾರಿಗೆ ನೌಕರರು ಹಾಗೂ ರಾಜ್ಯ ಸರ್ಕಾರದ ನಡುವಿನ ಬಿಕ್ಕಟ್ಟು ಹೆಚ್ಚಾಗುತ್ತಿದೆ. ಸಂಧಾನ ಸಫಲವಾಗಿದೆ ಬಸ್ ಸಂಚಾರ ಆರಂಭವಾಗಲಿದೆ ಎಂದು ನಿನ್ನೆ ರಾತ್ರಿ ಪ್ರತಿಭಟನಾಕಾರರು ಹೇಳಿದ್ದರು. ಆದರೆ ಸ್ವಲ್ಪ ಸಮಯದಲ್ಲೇ ಸಾರಿಗೆ ನೌಕರರ ಮುಖಂಡರು ಯೂಟರ್ನ್ ಹೊಡದರು. ಇದೇ ವಿಚಾರವಾಗಿ ಕೋಡಿಹಳ್ಳಿ ಚಂದ್ರಶೇಖರ್ ಪಟ್ಟು ಹಿಡಿದಿದ್ದಾರೆ.
ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆಗೆ ಕುಳಿತಿರುವ ಕೋಡಿಹಳ್ಳಿ ಚಂದ್ರಶೇಖರ್, ಸಚಿವರು ಬರುವವರೆಗೂ ಮುಷ್ಕರ ವಾಪಸ್ ಪಡೆಯುವುದಿಲ್ಲ. ಸಚಿವ ಲಕ್ಷ್ಮಣ ಸವದಿ ಇಲ್ಲಿಗೆ ಬಂದು ನಿನ್ನೆ ಕೊಟ್ಟ ಭರವಸೆಗಳ ಈಡೇರಿಕೆ ಬಗ್ಗೆ ಲಿಖಿತ ರೂಪದಲ್ಲಿ ಆಶ್ವಾಸನೆ ನೀಡಬೇಕು. ನಿನ್ನೆ ನಡೆದ ಒಂಬತ್ತು ಅಂಶದ ಭರವಸೆ ಬಗ್ಗೆ ಲಿಖಿತ ಪತ್ರ ತೆಗೆದುಕೊಂಡು ಸಚಿವರು ಸ್ಥಳಕ್ಕೆ ಬರಬೇಕು. ಅಲ್ಲಿವರೆಗೆ ಮುಷ್ಕರ ಮುಂದುವರಿಯುತ್ತೆ ಎಂದು ಹೇಳಿದ್ದಾರೆ.
PublicNext
14/12/2020 03:04 pm