ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

10 ಬೇಡಿಕೆಗಳಲ್ಲಿ 9 ಈಡೇರಿಸುತ್ತೇವೆ: ಕೆಲಸಕ್ಕೆ ಹಾಜರಾಗಿ ಎಂದ ಸವದಿ

ಬೆಂಗಳೂರು- ಸಾರಿಗೆ ನೌಕರರ ಹತ್ತು ಬೇಡಿಕೆಗಳಲ್ಲಿ 9ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ತಯಾರಿದೆ. ನೌಕರರು ಮುಷ್ಕರ ಕೈ ಬಿಟ್ಟು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಾರಿಗೆ ನಿಗಮಗಳ ನೌಕರರನ್ನು ಸರ್ಕಾರಿ ನೌಕರರನಾಗಿ ಮಾಡಿದರೆ ಉಳಿದೆಲ್ಲ ನಿಗಮಗಳ ನೌಕರರು ಅದೇ ಬೇಡಿಕೆಯನ್ನು ಮುಂದಿಟ್ಟು ಮನವಿ ಮಾಡುತ್ತಾರೆ. ರಾಜ್ಯದಲ್ಲು 30 ರಿಂದ 40 ನಿಗಮಗಳಿವೆ. ಇದರಿಂದ ಸರ್ಕಾರದ ಮೇಲೆ ಭಾರೀ ಪ್ರಮಾಣದ ಹಣಕಾಸಿನ ಹೊಡೆತ ಬೀಳುತ್ತೆ. ಅಭಿವೃದ್ಧಿ ಕೆಲಸ-ಕಾರ್ಯಗಳು ನಿಂತು ಹೋಗುತ್ತವೆ. ಹೀಗಾಗಿ ಸಾರಿಗೆ ನಿಗಮಗಳ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದರು

ನಾವು ನಮ್ಮ ಸಾರಿಗೆ ನೌಕರರೊಂದಿಗೆ ಚರ್ಚೆ ಮಾಡುತ್ತೇವೆ. ಕೋಡಿಹಳ್ಳಿ ಚಂದ್ರಶೇಖರ್ ಅವರಿಗೂ ನಮಗೂ ಸಂಬಂಧ ಇಲ್ಲ‌. ನಮ್ಮ ಮಾತಿಗೆ ಬೆಲೆ ಕೊಟ್ಟು ಸಾರಿಗೆ ನೌಕರರು ಕರ್ತವ್ಯಕ್ಕೆ ಮುಂದಾಗಿದ್ದಾರೆ‌‌. ಅವರಿವರ ಮಾತಿಗೆ ಕಿವಿಗೊಡಬೇಡಿ. ಸರ್ಕಾರ ನಿಮ್ಮೊಂದಿಗಿದೆ ಎಂದು ಸಾರಿಗೆ ನೌಕರರಿಗೆ ಸವದಿ ಮನವಿ ಮಾಡಿದ್ದಾರೆ‌.

Edited By : Nagaraj Tulugeri
PublicNext

PublicNext

14/12/2020 11:20 am

Cinque Terre

67.02 K

Cinque Terre

2

ಸಂಬಂಧಿತ ಸುದ್ದಿ