ಕೋಲಾರ: ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಪ್ರಕರಣದ ಬಂಧಿತ ಆರೋಪಿ ಕವಿರಾಜ್ ಈ ಹಿಂದೆ ಭೂಗತ ಪಾತಕಿ ರವಿ ಪೂಜಾರಿಯ ಸಹಚರನಾಗಿದ್ದ ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ.
ಪಿಯುಸಿ ಓದಿರುವ ಕವಿರಾಜ್ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ. ಮೂಲತಃ ನೇಪಾಳದ ಆತ ತಮಿಳುನಾಡಿನ ಚೆನ್ನೈ ಹಾಗೂ ಹೊಸೂರು ಸುತ್ತಮುತ್ತ ಭೂ ವ್ಯವಹಾರ ಮಾಡುತ್ತಿದ್ದ. ಈತ ವರ್ತೂರು ಪ್ರಕಾಶ್ ಅವರಿಗೆ ಬೆಂಗಳೂರಿನಲ್ಲಿ ಪರಿಚಯವಾಗಿದ್ದ. ಕವಿರಾಜ್ ಹಣಕ್ಕಾಗಿ ಸಂಚು ರೂಪಿಸಿ 8 ಮಂದಿಯ ಗುಂಪು ಕಟ್ಟಿಕೊಂಡು ವರ್ತೂರು ಪ್ರಕಾಶ್‌ರನ್ನು ಅಪಹರಿಸಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
PublicNext
13/12/2020 11:28 pm