ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ದೇಶದ ಜನತೆ ಹಸಿವಿನಿಂದ ಬಳಲುತ್ತಿರುವಾಗ ನೂತನ ಸಂಸತ್‌ ಭವನ ನಿರ್ಮಾಣದ ಅಗತ್ಯವಿತ್ತೇ?'

ಚೆನ್ನೈ: ದೇಶದ ಜನತೆ ಹಸಿವಿನಿಂದ ಬಳಲುತ್ತಿರುವಾಗ ನೂತನ ಸಂಸತ್‌ ಭವನ ನಿರ್ಮಾಣದ ಅಗತ್ಯವಿತ್ತೇ ಎಂದು ನಟ, ಮಕ್ಕಳ್ ನೀದಿ ಮಯ್ಯಂ (ಎಂಎನ್‌ಎಂ) ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ನೂತನ ಸಂಸತ್‌ ಭವನವನ್ನು ಚೀನಾದ ಮಹಾ ಗೋಡೆಗೆ ಹೋಲಿಸಿರುವ ಕಮಲ್ ಹಾಸನ್, ''ಚೀನಾದ ಮಹಾ ಗೋಡೆ ನಿರ್ಮಾಣದ ವೇಳೆ ಸಾವಿರಾರು ಜನರು ಸಾವನ್ನಪ್ಪಿದ್ದರು. ಆದರೆ ಚೀನಾ ದೇಶ ಮಾತ್ರ ಈ ಮಹಾಗೋಡೆಯು ಜನರಿಗೆ ರಕ್ಷಣೆ ಕೊಡುತ್ತೆ ಎಂದು ವಾದಿಸಿತ್ತು. ಈಗ ಕೊರೊನಾ ವೈರಸ್‌ನಿಂದಾಗಿ ಭಾರತ ಆರ್ಥಿಕ ಸಂಕಷ್ಟದಲ್ಲಿದೆ. ಜನರಿಗೆ ಉದ್ಯೋಗವಿಲ್ಲ, ಹಸಿವಿನಿಂದ ಬಳಲುತ್ತಿದ್ದಾರೆ. ಇಂತಹ ಸಮಯದಲ್ಲಿ ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಿ ನೂತನ ಸಂಸತ್ ಭವನ ನಿರ್ಮಿಸುವ ಅಗತ್ಯವೇನಿದೆ? ಪ್ರಧಾನಿ ನರೇಂದ್ರ ಮೋದಿ ಅವರೇ ಇದಕ್ಕೆ ಉತ್ತರ ಕೊಡಿ'' ಎಂದು ಕೇಳಿದ್ದಾರೆ.

Edited By : Vijay Kumar
PublicNext

PublicNext

13/12/2020 04:56 pm

Cinque Terre

44.34 K

Cinque Terre

13

ಸಂಬಂಧಿತ ಸುದ್ದಿ