ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಡ್ಡಾ ಭೇಟಿ ವೇಳೆ ಭದ್ರತಾ ಲೋಪ: ಪ.ಬಂ ಮೂವರು ಐಪಿಎಸ್ ಅಧಿಕಾರಿಗಳು ಕೇಂದ್ರ ಸೇವೆಗೆ ನಿಯೋಜನೆ

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬೆಂಗಾವಲು ವಾಹನ ಸೇರಿದಂತೆ ಬಿಜೆಪಿ ನಾಯಕರ ವಾಹನಗಳ ಮೇಲೆ ಗುರುವಾರ ನಡೆದ ದಾಳಿಯನ್ನು ಕೇಂದ್ರ ಗೃಹ ಸಚಿವಾಲಯ ಗಂಭೀರವಾಗಿ ಪರಿಗಣಿಸಿದೆ. ಭದ್ರತಾ ಲೋಪ ಆರೋಪದ ಮೇರೆಗೆ ಪಶ್ಚಿಮ ಬಂಗಾಳದ ಮೂವರು ಐಪಿಎಸ್ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯವು ಶನಿವಾರ ಏಕಪಕ್ಷೀಯವಾಗಿ ಸಮನ್ಸ್ ಜಾರಿ ಮಾಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಡಿಸೆಂಬರ್ 9ರಿಂದ 10ರ ವರೆಗೆ ನಡ್ಡಾ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಡೈಮಂಡ್ ಹಾರ್ಬರ್‌ನ ಎಸ್‌ಪಿ ಭೋಲನಾಥ್ ಪಾಂಡೆ, ಪ್ರೆಸಿಡೆನ್ಸಿ ರೇಂಜ್‌ನ ಡಿಐಜಿ ಪ್ರವೀಣ್ ತ್ರಿಪಾಠಿ ಹಾಗೂ ದಕ್ಷಿಣ ಬಂಗಾಳದ ಎಡಿಜಿ ರಾಜೀವ್ ಮಿಶ್ರಾ ಅವರು ಭದ್ರತಾ ಜವಾಬ್ದಾರಿ ಹೊತ್ತಿದ್ದರು.

ಅಖಿಲ ಭಾರತ ಸೇವಾ ಅಧಿಕಾರಿಗಳ ಸರ್ಕಾರಿ ನಿಯದ ಪ್ರಕಾರವೇ ಅಧಿಕಾರಿಗಳಿಗೆ ಏಕಪಕ್ಷೀಯವಾಗಿ ಸಮನ್ಸ್ ನೀಡಲಾಗಿದೆ ಎಂದು ವರದಿಯಾಗಿದೆ. ಸಾಮಾನ್ಯವಾಗಿ ಯಾವುದೇ ಅಖಿಲ ಭಾರತೀಯ ಸೇವೆಯಲ್ಲಿರುವ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ನಿಯೋಜಿಸುವ ಮುನ್ನ ರಾಜ್ಯ ಸರ್ಕಾರಗಳ ಅನುಮತಿಯನ್ನು ಪಡೆಯಲಾಗುತ್ತದೆ. ಆದರೆ ಪಶ್ಚಿಮ ಬಂಗಾಳ ಸರ್ಕಾರದ ಅನುಮತಿ ಪಡೆಯದೇ ಏಕಪಕ್ಷೀಯವಾಗಿ ಕೇಂದ್ರ ಸೇವೆಗೆ ಮೂವರು ಐಪಿಎಸ್ ಅಧಿಕಾರಿಗಳನ್ನು ಕೇಂದ್ರ ಗೃಹ ಸಚಿವಾಲಯ ನಿಯೋಜಿಸಿದೆ.

7 ಜನರ ಬಂಧನ:

ಈ ನಡುವೆ ಗುರುವಾರದ ದಾಳಿ ಪ್ರಕರಣ ಸ್ವಯಂಪ್ರೇರಿತವಾಗಿ ಕೇಸು ದಾಖಲಿಸಿಕೊಂಡಿರುವ ಬಂಗಾಳ ಪೊಲೀಸರು 3 ಎಫ್‌ಐಆರ್‌ ದಾಖಲಿಸಿ, 7 ಜನರನ್ನು ಬಂಧಿಸಿದ್ದಾರೆ. ವಿಶೇಷವೆಂದರೆ ಈ ಪೈಕಿ ಒಂದು ಎಫ್‌ಐಆರ್‌ ಅನ್ನು ನಡ್ಡಾ ವಾಹನವನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ಬಿಜೆಪಿ ನಾಯಕ ರಾಕೇಶ್‌ ಸಿಂಗ್‌ ಮೇಲೆ ಪ್ರಚೋದನಾಕಾರಿ ಭಾಷಣ ಮಾಡಿದ ಕಾರಣಕ್ಕಾಗಿ ದಾಖಲಿಸಲಾಗಿದೆ.

Edited By : Vijay Kumar
PublicNext

PublicNext

12/12/2020 07:45 pm

Cinque Terre

114.69 K

Cinque Terre

15

ಸಂಬಂಧಿತ ಸುದ್ದಿ