ರಾಮನಗರ: ಸದ್ಯ ಗ್ರಾಮ ಪಂಚಾಯತ್ ಚುನಾವಣಾ ಕಣ ರಂಗೇರುತ್ತಿದೆ ರಾಜಕೀಯ ಗಣ್ಯರು ಮತಯಾಚನೆಯ ಭರಾಟೆಯಲ್ಲಿದ್ದಾರೆ.
ಇದರ ಮಧ್ಯೆ ಗ್ರಾ.ಪಂ ಚುನಾವಣೆ ಹಿನ್ನೆಲೆ ಚನ್ನಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಬಿಜೆಪಿ ಎಂಎಲ್ಸಿ ಸಿ ಪಿ ಯೋಗೇಶ್ವರ್ ಅವರು ಹೆಚ್ಡಿಕೆ ಹಾಗೂ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕುಮಾರಸ್ವಾಮಿ ಸರ್ಕಾರವನ್ನ ಸ್ಕೆಚ್ ಹಾಕಿ ತೆಗೆದಿದ್ದು ನಾನೇ.
ನನ್ನನ್ನ ಡಿಕೆಶಿ-ಹೆಚ್ ಡಿಕೆ ಸೇರಿ ಸೋಲಿಸಿದ್ದರು. ಅದಕ್ಕಾಗಿ ನಾನು ಬೆಂಗಳೂರಿನಲ್ಲಿ ಸ್ಕೆಚ್ ಹಾಕಿ ಸರ್ಕಾರವನ್ನೇ ಉರುಳಿದೆ ಎಂದಿದ್ದಾರೆ.
ಅಂದು ಜೋಡೆತ್ತು, ಇವತ್ತು ಕಿತ್ತಾಡ್ತಿದ್ದಾರೆ. ಅಧಿಕಾರ ಹೋಗ್ತಿದ್ದಂತೆ ಶಿವಕುಮಾರ್ ತಿಹಾರ್ ಜೈಲಿಗೆ ಹೋದ.
ಕರ್ನಾಟಕದಿಂದ ಅಲ್ಲಿಗೆ ಹೋದವನು ಶಿವಕುಮಾರ್ ಒಬ್ಬನೇ, ಆದರೆ ಈಗ ಕೆಪಿಸಿಸಿ ಅಧ್ಯಕ್ಷ. ಅವನ ತಮ್ಮ ಸುರೇಶ್ ನನ್ನನ್ನ ಯಾರು ಅಂತಿದ್ದ.
ಈಗ ಚನ್ನಪಟ್ಟಣದವರ ಶಕ್ತಿ ಅಣ್ಣ-ತಮ್ಮನಿಗೆ ಗೊತ್ತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ದೇವೇಗೌಡರ ಮನೆಯವರಿಗೂ ನಾನು ಏನೆಂದು ಗೊತ್ತಾಗಿದೆ. ನಾನು ಎಂಎಲ್ ಸಿಗೆ ರಾಜೀನಾಮೆ ಕೊಡ್ತೇನೆ, ಕುಮಾರಸ್ವಾಮಿ ಚನ್ನಪಟ್ಟಣದ 10 ಊರಿನ ಹೆಸರು ಹೇಳಲಿ ಎಂದು ಯೋಗೇಶ್ವರ್ ಕಿಡಿಕಾರಿದ್ದಾರೆ.
PublicNext
11/12/2020 11:05 am