ಬೆಂಗಳೂರು: ಜೂಜುಕೋರರ ವಿರುದ್ಧ ಕಠಿಣ ಕಾಯಿದೆ ಪ್ರಯೋಗಿಸಲಾಗುವುದು ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಒಂದು ವಾರದ ಹಿಂದೆ ಈ ಜೂಜಾಟದ ಜಾಲದ ಜತೆಗೆ ಹ್ಯಾಕಿಂಗ್ ಪ್ರಕರಣವನ್ನೂ ಬೆಂಗಳೂರು ಪೊಲೀಸರು ಭೇದಿಸಿದ್ದಾರೆ. ಅದನ್ನು ಊಹಿಸಿಕೊಂಡರೇ ಆಶ್ಚರ್ಯವಾಗುತ್ತದೆ. ಈ ದಂಧೆಗೆ ಸಹಕಾರ ನೀಡಿದರೆ ಮುಂದಿನ ಪೀಳಿಗೆಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಮಾದಕ ದ್ರವ್ಯ ಪೂರೈಕೆ ಜಾಲದಲ್ಲಿ ಭಾಗಿಯಾಗಿದ್ದ 21 ಡಾರ್ಕ್ ವೆಬ್‌ಗಳನ್ನು ಪೊಲೀಸರು ಇದುವರೆಗೂ ಪತ್ತೆ ಹಚ್ಚಿದ್ದಾರೆ. ರಿಕ್ರಿಯೇಷನ್ ಕ್ಲಬ್‌ಗಳಿಗೆ ನಿಯಂತ್ರಣ ಹೇರುವುದಕ್ಕಾಗಿ ಗ್ಯಾಂಬ್ಲಿಂಗ್ ಆ್ಯಕ್ಟ್‌ಗೆ ತಿದ್ದುಪಡಿ ತರಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಕಾಂಗ್ರೆಸ್‌ನ ಈಶ್ವರ ಖಂಡ್ರೆ ಪ್ರಶ್ನೆಗೆ ವಿಧಾನಸಭೆ ಪ್ರಶ್ನೋತ್ತರ ವೇಳೆ ಉತ್ತರಿಸಿದರು.
PublicNext
09/12/2020 09:32 am