ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ನಡೆಯನ್ನು ಹಾಲಿ ಪ್ರಧಾನಿ ಇಮ್ರಾನ್ ಖಾನ್ ಅನುಸರಿಸಿದ್ದಾರೆ.
ಹೌದು, ಇಮ್ರಾನ್ ಖಾನ್ ತಮ್ಮ ಟ್ವಿಟರ್ ಖಾತೆಯಿಂದ ಎಲ್ಲರನ್ನೂ ಅನ್ಫಾಲೋ ಮಾಡಿದ್ದಾರೆ. ಕಳೆದ ಸೋಮವಾರ ಎಲ್ಲರನ್ನೂ ಅನ್ಫಾಲೋ ಮಾಡಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಕಾರಣಗಳನ್ನು ಹುಡುಕಿರುವ ನೆಟ್ಟಿಗರು ತಮಾಷೆ ಕಾರಣಗಳನ್ನು ಕೊಟ್ಟು ಗೇಲಿ ಮಾಡುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೆಟ್ಟಿಗರೊಬ್ಬರು, 'ನವಾಜ್ ಷರೀಫ್ ಅವರ ಟ್ವಿಟರ್ ಖಾತೆ ನೋಡಿ ಇಮ್ರಾನ್ ಖಾನ್ಗೆ ಕೀಳರಿಮೆ ಉಂಟಾಗಿದೆ' ಎಂದಿದ್ದಾರೆ. ಮತ್ತೆ ಕೆಲವರು 'ಇಮ್ರಾನ್ ಖಾನ್ ತಮ್ಮ ವಿಚ್ಛೇದಿತ ಮೊದಲ ಪತ್ನಿಯನ್ನೂ ಅನ್ಫಾಲೊ ಮಾಡಿರುವುದನ್ನು ಟ್ರೋಲ್ ಮಾಡಿದ್ದಾರೆ.
PublicNext
08/12/2020 08:38 pm