ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಜಿ ಸಿಎಂ ಎಸ್.ಆರ್. ಕಂಠಿ ಪತ್ನಿ ಮರಿಬಸಮ್ಮ ನಿಧನ

ಬಾಗಲಕೋಟೆ: ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಆರ್. ಕಂಠಿ ಅವರ ಪತ್ನಿ ಮರಿಬಸಮ್ಮ ಎಸ್. ಕಂಠಿ (102) ಅವರು ಮಂಗಳವಾರ ನಿಧನರಾಗಿದ್ದಾರೆ.

ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರನ್ನು ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಿಸದೇ ನಿಧರಾಗಿದ್ದಾರೆ. ಶತಾಯುಷಿ ಆಗಿದ್ದ ಮರಿಬಸಮ್ಮ ಅವರಿಗೆ ಇಬ್ಬರು ಪುತ್ರರಿದ್ದು, ಓರ್ವ ಪತ್ರ ಮಹೇಂದ್ರ ಕಂಠಿ ಅವರು ಸೈನಿಕ ಶಾಲೆಯ ಚೇರಮನ್ ಆಗಿದ್ದಾರೆ. ಮತ್ತೋರ್ವ ಪುತ್ರ ಈ ಹಿಂದೆಯೇ ನಿಧನರಾಗಿದ್ದಾರೆ.

ಎಸ್.ಆರ್. ಕಂಠಿ ಅವರು ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಸ್ಥಾಪಿಸಿರುವ ಸೈನಿಕ ಶಾಲೆಯಲ್ಲಿ ಮರಿಬಸಮ್ಮ ಪುತ್ರನೊಂದಿಗೆ ವಾಸುತ್ತಿದ್ದರು. ಸೈನಿಕ ಶಾಲೆಯ ಆವರಣದಲ್ಲಿ ಬುಧವಾರ ಬೆಳಗ್ಗೆ 8ರಿಂದ 10ರ ವರೆಗೆ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ಅವರ ಸ್ವಂತ ಊರು ಬಾಗಲಕೋಟೆ ಜಿಲ್ಲೆಯ ಇಳಕಲ್ಲ ನಗರದಲ್ಲಿರುವ ಅವರ ಪತಿ ಎಸ್.ಆರ್. ಕಂಠಿ ಅವರ ಸಮಾಧಿ ಪಕ್ಕದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲು ತೀರ್ಮಾನಿಸಲಾಗಿದೆ.

Edited By : Vijay Kumar
PublicNext

PublicNext

08/12/2020 07:13 pm

Cinque Terre

52.37 K

Cinque Terre

12

ಸಂಬಂಧಿತ ಸುದ್ದಿ