ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೇರಾ ಕಾಯ್ದೆಯಿಂದ ವಿಶ್ವಾಸ ವೃದ್ಧಿ : ಪ್ರಧಾನಿ ಮೋದಿ

ಲಖನೌ : ಬಿಲ್ಡರ್ ಮತ್ತು ಮನೆ ಖರೀದಿಸುವವರ ನಡುವೆ ವಿಶ್ವಾಸ ಹೆಚ್ಚಿಸಲು ಮತ್ತು ಸಮಸ್ಯೆ ದೂರವಾಗಿಸಲು ರೇರಾ ಕಾಯ್ದೆ ಜಾರಿಗೆ ತರಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಿಡಿಯೊ ಕಾನ್ಫರೆನ್ಸ್ ನಲ್ಲಿ ಆಗ್ರಾ ಮೆಟ್ರೊ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ದುರುದ್ದೇಶ ಚಿಂತನೆಯ ಜನರು ರಿಯಲ್ ಎಸ್ಟೇಟ್ ವಲಯಕ್ಕೆ ಕೆಟ್ಟ ಹೆಸರು ತಂದಿದ್ದರು.

ವಸತಿ ನಿರ್ಮಾಣಗಾರರು ಮತ್ತು ಗ್ರಾಹಕರ ನಡುವೆ ವಿಶ್ವಾಸದ ಕೊರತೆ ಇತ್ತು. ಈ ಕೊರತೆ ನೀಗಿಸಲು ರೇರಾ ತರಲಾಗಿದೆ.

ವರದಿಗಳ ಪ್ರಕಾರ, ಕಾಯ್ದೆ ಜಾರಿಗೊಂಡ ಬಳಿಕ ಮಧ್ಯಮ ವರ್ಗದ ಮನೆಗಳು ತ್ವರಿತವಾಗಿ ನಿರ್ಮಾಣಗೊಳ್ಳುತ್ತಿವೆ ಎಂದರು.

ಆಧುನಿಕ ಸಾರಿಗೆ ವ್ಯವಸ್ಥೆಯಿಂದ ವಸತಿ ಯೋಜನೆವರಿಗೆ ಸಮಗ್ರ ಅಭಿವೃದ್ಧಿಯಿಂದ ಮಾತ್ರವೇ ನಗರ ಜೀವನ ಸುಲಲಿತವಾಗಲಿದೆ ಎಂದರು.

ಪ್ರಧಾನಮಂತ್ರಿ ಆವಾಸ್ ಯೋಜನಾದಡಿ ಸುಮಾರು ಒಂದು ಕೋಟಿ ಮನೆಗಳನ್ನು ನಗರ ಪ್ರದೇಶದ ಬಡಜನರಿಗೆ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.

ಇದೇ ಮೊದಲ ಬಾರಿಗೆ ನಗರ ಪ್ರದೇಶದಲ್ಲಿ ಬಡಜನರಿಗೆ ಮನೆ ಖರೀದಿಸಲು ಆರ್ಥಿಕ ನೆರವು ನೀಡಲಾಗುತ್ತಿದೆ.

ಇದುವರೆಗೆ ಸುಮಾರು 12 ಲಕ್ಷಕ್ಕೂ ಅಧಿಕ ಕುಟುಂಬಗಳಿಗೆ ಮನೆ ಖರೀದಿಗಾಗಿ ₹ 28 ಸಾವಿರ ಕೋಟಿ ಒದಗಿಸಲಾಗಿದೆ ಎಂದರು.

Edited By : Nirmala Aralikatti
PublicNext

PublicNext

07/12/2020 10:24 pm

Cinque Terre

89.05 K

Cinque Terre

6