ಬೆಂಗಳೂರು: ಲವ್ ಜಿಹಾದ್ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತೆ ಅಪಸ್ವರ ಎತ್ತಿದ್ದಾರೆ. ಚಳಿಗಾಲದ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಮತ್ತು ಲವ್ ಜಿಹಾದ್ ನಿಷೇಧ ಕಾಯ್ದೆಯ ಮಸೂದೆ ಮಂಡಿಸಿದರೆ ಅದನ್ನ ನಾವು ವಿರೋಧಿಸುತ್ತೇವೆ’ ಎಂದಿದ್ದಾರೆ.
ನಾಳೆ ಸೋಮವಾರದಿಂದ (ಡಿ. 7) ಅಧಿವೇಶನ ನಡೆಯಲಿರುವುದರಿಂದ ಉಭಯ ಸದನಗಳ ಪಕ್ಷದ ಹಿರಿಯ ಸದಸ್ಯರ ಸಭೆ ಕರೆದಿದ್ದೆ. ಅಧಿವೇಶನದ ಕಾರ್ಯಸೂಚಿ ಇನ್ನೂ ಆಗಿಲ್ಲ. ಅಧಿವೇಶನದಲ್ಲಿ ಏನೇನು ಚರ್ಚೆ ಮಾಡಬೇಕು ಅಂದುಕೊಂಡಿದ್ದಾರೊ ಗೊತ್ತಿಲ್ಲ’ ಎಂದರು.
ಕಳೆದ ವರ್ಷದ ಪ್ರವಾಹ ಸಂತ್ರಸ್ತರಿಗೆ ಸರ್ಕಾರ ಇನ್ನೂ ಪರಿಹಾರ ನೀಡಿಲ್ಲ. ಈಗ ಬಿಜೆಪಿಯವರು ಹೊಸ ಸಮಸ್ಯೆಗಳನ್ನು ಹುಟ್ಟು ಹಾಕುತ್ತಿದ್ದಾರೆ. ಮನೆಗಳನ್ನು ಕಟ್ಟಲು ಅನುದಾನ ಕೊಟ್ಟಿಲ್ಲ. ಅವರಿಗೆ ಬೇಕಾದವರಿಗೆ ಅನುದಾನ ಕೊಡಲು ಅನ್ ಲಾಕ್ ಮಾಡುತ್ತಾರೆ. ಬೇಡದವರಿಗೆ ಕೊಡಲ್ಲ’ ಎಂದು ಸಿದ್ದರಾಮಯ್ಯ ದೂರಿದರು.
PublicNext
06/12/2020 07:39 pm