ದೆಹಲಿ: ಹೊಸ ಕೃಷಿ ಮಾರುಕಟ್ಟೆ ಕಾನೂನುಗಳ ವಿರುದ್ಧ ರೈತ ಸಂಘಟನೆಗಳು ಡಿಸೆಂಬರ್ 8ರಂದು ಕರೆ ನೀಡಿರುವ ‘ಭಾರತ್ ಬಂದ್’ಗೆ ಕಾಂಗ್ರೆಸ್ ಭಾನುವಾರ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದೆ. ಎಲ್ಲಾ ಜಿಲ್ಲೆ ಮತ್ತು ರಾಜ್ಯ ಕೇಂದ್ರ ಕಚೇರಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದೆ. ನವೆಂಬರ್ 26ರಿಂದ ದೆಹಲಿಯ ವಿವಿಧ ಗಡಿಗಳಲ್ಲಿ ಇರುವ ರೈತರ ಪ್ರತಿನಿಧಿಗಳು, ಡಿಸೆಂಬರ್ 8ರಂದು ಭಾರತ್ ಬಂದ್ಗೆ ಕರೆ ನೀಡಿರುವುದಾಗಿ ಹೇಳಿದ್ದರು.
ಡಿ.8ರ ಭಾರತ್ ಬಂದ್ಗೆ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ಘೋಷಿಸಲು ಬಯಸುತ್ತೇನೆ. ಟ್ರಾಕ್ಟರ್ ರ್ಯಾಲಿಗಳು, ಸಹಿ ಅಭಿಯಾನ ಹಾಗೂ ಕಿಸಾನ್ ರ್ಯಾಲಿಗಳ ಮೂಲಕ ಪಕ್ಷದ ನಾಯಕ ರಾಹುಲ್ ಗಾಂಧಿ ರೈತರಿಗೆ ನೆರವಾಗುತ್ತಿದ್ದಾರೆ. ನಮ್ಮ ಜಿಲ್ಲಾ ಹಾಗೂ ಪ್ರಧಾನ ಕಚೇರಿಗಳ ಪ್ರತಿಭಟನಾ ಸಭೆ ನಡೆಯಲಿವೆ ಎಂದು ಎಐಸಿಸಿ ಕಚೇರಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಪವನ್ ಖೇರಾ ತಿಳಿಸಿದರು.
PublicNext
06/12/2020 06:56 pm