ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಆಡಳಿತ ಯಂತ್ರ ಯಾವುದೂ ಸರಿ ಇಲ್ಲ. ಸರಿ ಮಾಡಬೇಕಾದ ಅವಶ್ಯಕತೆ ಇದೆ. ಪರಮಾಧಿಕಾರ ಬಳಸುವ ಅವಕಾಶ ನನಗಿದೆ. ಆದರೆ ಅದನ್ನ ಬಳಸಲು ಸರ್ಕಾರ ಅವಕಾಶ ಮಾಡಿಕೊಡಬಾರದು ಎಂದು ಅಲ್ಲಿನ ರಾಜ್ಯಪಾಲ ಜಗದೀಪ್ ಧನಕರ್ ಎಚ್ಚರಿಕೆ ನೀಡಿದ್ದಾರೆ.
ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಾತನಾಡಿದ ಅವರು ಪಶ್ಚಿಮ ಬಂಗಾಳದ ದೀದಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರದ ಆಡಳಿತ ಹಾದಿ ತಪ್ಪಿದೆ. ಅಸಂವಿಧಾನಿಕ ನಡೆಗಳನ್ನು ಸಹಿಸಿಕೊಂಡಿರಲಾಗದು. ರಾಜ್ಯ ಹೊತ್ತಿ ಉರಿಯುತ್ತಿದೆ. ರಾಜಕೀಯ ವೈಷಮ್ಯದ ಕೃತ್ಯಗಳು ಹೆಚ್ಚಾಗಿವೆ. ಹೀಗೆ ಮುಂದುವರೆದರೆ ಪರಮಾಧಿಕಾರ ಬಳಸಬೇಕಾಗುತ್ತದೆ ಎಂದು ರಾಜ್ಯಪಾಲ ಜಗದೀಪ್ ಧನಕರ್ ಎಚ್ಚರಿಕೆ ನೀಡಿದ್ದಾರೆ.
PublicNext
06/12/2020 03:31 pm