ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಮಾರಸ್ವಾಮಿ-ಸಿದ್ದರಾಮಯ್ಯ ಸತ್ಯ ಹೇಳುತ್ತಿಲ್ಲ

ಸಮ್ಮಿಶ್ರ ಸರ್ಕಾರದ ಪತನಕ್ಕೆ ನಾನಲ್ಲ ನೀನು ಕಾರಣ ಎಂಬಂತೆ ಇಬ್ಬರು ಮಾಜಿ ಸಿಎಂಗಳು ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಈ ಇಬ್ಬರೂ ನಾಯಕರ ರಾಜಕೀಯ ಸಮರ ಉಭಯ ಪಕ್ಷಗಳಿಗೂ ಅಂಟಿದೆ. ಈ ವಿದ್ಯಮಾನದ ಬಗ್ಗೆ ಸಚಿವ ಎಸ್ ಟಿ ಸೋಮಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ.

ಮೈಸೂರಿನಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಇಬ್ಬರೂ ಸತ್ಯ ಹೇಳುತ್ತಿಲ್ಲ ಎಂದಿದ್ದಾರೆ. ಇಬ್ಬರೂ ನಾಯಕರು ಎಲ್ಲ ರೀತಿಯ ಅಧಿಕಾರವನ್ನು ಅನುಭವಿಸಿದ್ದಾರೆ. ಸತ್ಯ ಏನು ಎಂಬುದು ಅವರಿಬ್ಬರಿಗೆ ಗೊತ್ತು, ಆದರೆ ಇಬ್ಬರೂ ಸತ್ಯ ಹೇಳುತ್ತಿಲ್ಲ ಎಂದರು.

ಕಾಂಗ್ರೆಸ್‌ನಲ್ಲಿದ್ದಾಗ ನಾನು ಆ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದೆ. ಆದರೆ ನಾನು ಸಿದ್ದರಾಮಯ್ಯ ಟೀಂ ಅಲ್ಲ. ಬದಲಾಗಿ ನಾನು ಅಮಾಯಕ ಹಾಗೂ ಮುಗ್ದನಾಗಿದ್ದೇನೆ. ರಾಜಕೀಯದಲ್ಲಿ ಅಂಬೆಗಾಲು ಇಡುತ್ತಿದ್ದೇನೆ ಎಂದು ಸಿದ್ದರಾಮಯ್ಯ ಹಾಗೂ ಎಚ್‌ಡಿ ಕುಮಾರಸ್ವಾಮಿ ಆರೋಪ ಪ್ರತ್ಯಾರೋಪಕ್ಕೆ ಸೋಮಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ.

Edited By : Nagaraj Tulugeri
PublicNext

PublicNext

06/12/2020 02:32 pm

Cinque Terre

54.17 K

Cinque Terre

1

ಸಂಬಂಧಿತ ಸುದ್ದಿ