ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಗಾ ನಾಯಕತ್ವದಲ್ಲಿ ಸ್ಥಿರತೆಯ ಕೊರತೆ ಶರದ್ ಪವಾರ್

ಮುಂಬೈ: ನಿತ್ಯ ಒಂದಿಲ್ಲೊಂದು ಸಂಗತಿಯಲ್ಲಿ ಮೋದಿ ಸರ್ಕಾರವನ್ನು ಟೀಕಿಸುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನಾಯಕತ್ವವನ್ನು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ ಸಿಪಿ) ವರಿಷ್ಠ ಶರದ್ ಪವಾರ್ ಟೀಕಿಸಿದ್ದಾರೆ.

ಮಹಾ ವಿಕಾಸ ಅಘಾಡಿ ಸರ್ಕಾರವು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಾಧ್ಯಮ ಸಂಸ್ಥೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ರಾಷ್ಟ್ರಮಟ್ಟದ ನಾಯಕನಾಗಿ ರಾಹುಲ್ ಅವರಲ್ಲಿ ಸ್ವಲ್ಪ ಸ್ಥಿರತೆಯ ಕೊರತೆ ಕಾಣಿಸುತ್ತಿದೆ.

ಪಕ್ಷದೊಳಗೆ ಅವರನ್ನು ಹೇಗೆ ಸ್ವೀಕರಿಸುತ್ತಾರೆ ಎಂಬುದರ ಮೇಲೆ ಅವರ ನಾಯಕತ್ವ ಅವಲಂಬಿಸಿರುತ್ತದೆ’ ಎಂದಿದ್ದಾರೆ.

‘ರಾಹುಲ್ ಅವರು ಅಧ್ಯಾಪಕರನ್ನು ಮೆಚ್ಚಿಸಲು ತುದಿಗಾಲಿನಲ್ಲಿ ನಿಂತಿರುವ ವಿದ್ಯಾರ್ಥಿಯಂತೆ ಕಾಣುತ್ತಾರೆ’ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ತಮ್ಮ ಆತ್ಮಚರಿತ್ರೆ ‘ಎ ಪ್ರಾಮಿಸ್ಡ್ ಲ್ಯಾಂಡ್’ ನಲ್ಲಿ ಟೀಕಿಸಿದ್ದರು.

ಈ ಕುರಿತು ಪ್ರತಿಕ್ರಿಯಿಸಿದ ಪವಾರ್ ‘ಎಲ್ಲರ ದೃಷ್ಟಿಕೋನವನ್ನು ಒಪ್ಪಲೇಬೇಕೆಂದಿಲ್ಲ. ಬೇರೆ ದೇಶಗಳ ನಾಯಕರ ಕಾರ್ಯವೈಖರಿ ಬಗ್ಗೆ ನಾನೇನೂ ಮಾತನಾಡುವುದಿಲ್ಲ’ ಎಂದು ತಿಳಿಸಿದ್ದಾರೆ.

Edited By : Nirmala Aralikatti
PublicNext

PublicNext

05/12/2020 12:20 pm

Cinque Terre

83.07 K

Cinque Terre

5

ಸಂಬಂಧಿತ ಸುದ್ದಿ