ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಓವೈಸಿಯ ಕೋಟೆ ಛಿದ್ರ : ಮುತ್ತಿನ ನಗರಿಯಲ್ಲಿ ಕಮಲ ಕಿಲ ಕಿಲ

ಹೈದರಾಬಾದ್ : ಮುತ್ತಿನ ನಗರದಲ್ಲಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ಚುನಾವಣೆಯ ಮತ ಎಣಿಕೆ ಕಾರ್ಯ ಚುರುಕಾಗಿದೆ.

ಹೌದು ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್ ಎಂಸಿ) ಚುನಾವಣೆಯಲ್ಲಿ ಸಿಎಂ ಚಂದ್ರಶೇಖರ್ ರಾವ್ ಮತ್ತು ಅಸಾದುದ್ದೀನ್ ಒವೈಸಿಯ ಕೋಟೆಯನ್ನು ಛಿದ್ರಗೊಳಿಸಿ ಬಿಜೆಪಿ ಮೊದಲ ಬಾರಿಗೆ ಎರಡಂಕಿಯನ್ನು ದಾಟಿ ಮುಂಚೂಣಿಯಲ್ಲಿದೆ.

ಒಟ್ಟು 150 ಸ್ಥಾನಗಳ ಪೈಕಿ ಟಿಆರ್ ಎಸ್ 71ರಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 40, ಎಐಎಂಎಂ 35 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಕಾಂಗ್ರೆಸ್ 3 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.

ವಿಶೇಷ ಏನೆಂದರೆ 2016ರ ಚುನಾವಣೆಯಲ್ಲಿ ಟಿಆರ್ ಎಸ್ 99, ಎಐಎಂಎಂ 44, ಕಾಂಗ್ರೆಸ್ 3 ವಾರ್ಡ್ ಗಳನ್ನು ಗೆದ್ದುಕೊಂಡಿದ್ದರೆ ಬಿಜೆಪಿ ಕೇವಲ 4 ವಾರ್ಡ್ ಗಳನ್ನು ಮಾತ್ರ ಗೆದ್ದುಕೊಂಡಿತ್ತು.

ಆದರೆ ಈ ಬಾರಿ ಬಿಜೆಪಿ ಈ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿತ್ತು. ಪರಿಣಾಮ ಗೃಹ ಸಚಿವ ಅಮಿತ್ ಶಾ ಕೇಂದ್ರದ ಬಿಜೆಪಿ ನಾಯಕರು ವ್ಯಾಪಕ ಪ್ರಚಾರ ಕೈಗೊಂಡಿದ್ದರು.

ಬ್ಯಾಲೆಟ್ ಪೇಪರ್ ನಲ್ಲಿ ಚುನಾವಣೆ ನಡೆದಿರುವ ಕಾರಣ ಅಂತಿಮ ಫಲಿತಾಂಶಗಳು ರಾತ್ರಿ ಪ್ರಕಟವಾಗುವ ಸಾಧ್ಯತೆಯಿದೆ.

Edited By : Nirmala Aralikatti
PublicNext

PublicNext

04/12/2020 05:22 pm

Cinque Terre

152.32 K

Cinque Terre

28

ಸಂಬಂಧಿತ ಸುದ್ದಿ