ಮಡಿಕೇರಿ: ‘ಆತ್ಮಹತ್ಯೆಗೆ ಶರಣಾಗುವ ರೈತರು ಹೇಡಿಗಳು ಎಂಬ ಹೇಳಿಕೆಗೆ ಕ್ಷಮೆಯಾಚಿಸುವುದಿಲ್ಲ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳುವವರು ಹೇಡಿಗಳೆಂದು ಹೇಳಿದ್ದೇನೆಯೇ ಹೊರತು, ರೈತರೆಲ್ಲರೂ ಹೇಡಿಗಳೆಂದು ಎಲ್ಲಿಯೂ ಹೇಳಿಲ್ಲ. ರೈತರು ಈ ದೇಶಕ್ಕೆ ಅನ್ನ ನೀಡುವ ಅನ್ನದಾತರು ಎಂದು ಸ್ಪಷ್ಟನೆ ನೀಡಿದ್ದಾರೆ.
‘ಆತ್ಮಹತ್ಯೆಗೆ ಶರಣಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಯಾರೇ ಆತ್ಮಹತ್ಯೆ ಮಾಡಿಕೊಂಡರೂ ಹೇಡಿಗಳ ಕೆಲಸ. ಪುರಾಣದಲ್ಲೂ ಈ ಕುರಿತು ಉಲ್ಲೇಖವಿದೆ. ನಾನು ಕೃಷಿ ಮಂತ್ರಿಯಾಗಿ, ರೈತರನ್ನು ಉಲ್ಲೇಖಿಸಿ ಹೇಳಿಕೆ ನೀಡಿರುವೆ. ಬಂದ ಸಂಕಷ್ಟ ಎದುರಿಸಿ, ಧೈರ್ಯದಿಂದ ಜೀವನ ಮಾಡಿ ಎಂದು ಮನವಿ ಮಾಡುವುದು ತಪ್ಪಾ’ ಎಂದು ಸಚಿವರು ಪ್ರಶ್ನಿಸಿದ್ದಾರೆ.
PublicNext
03/12/2020 08:04 pm