ಮಡಿಕೇರಿ: ಆತ್ಮಹತ್ಯೆಗೆ ಶರಣಾಗುವ ರೈತರು ಹೇಡಿಗಳು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿ ಬಿದಿರು ಸಂಪನ್ಮೂಲ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಕೃಷಿಯಲ್ಲಿ ಸೈ ಎನಿಸಿಕೊಂಡು ಉತ್ತಮ ಜೀವನ ನಡೆಸುತ್ತಿರುವ ರೈತರಿದ್ದಾರೆ. ಆದರೆ ಕೆಲವರಿಗೆ ತನ್ನ ಹೆಂಡತಿ, ಮಕ್ಕಳನ್ನ ನೋಡಿಕೊಳ್ಳಲಾಗುತ್ತಿಲ್ಲ. ಅಂತವರು ಹೇಡಿಗಳು. ಅಂತವರು ಆತ್ಮಹತ್ಯೆಗೆ ಶರಣಾಗುತ್ತಾರೆ ಎಂದಿದ್ದಾರೆ.
ಪುರಂದರದಾಸ ವಾಣಿಯನ್ನ ನೆನೆದ ಸಚಿವರು, 'ಈಸಬೇಕು, ಇದ್ದು ಜಯಿಸಬೇಕು. ಏನೇ ಸಮಸ್ಯೆ ಇದ್ದರೂ ಇಲ್ಲೇ ಇದ್ದು ಜಯಿಸಬೇಕು. ಹೇಡಿ ಕೆಲಸಕ್ಕೆ ರೈತರು ಮುಂದಾಗಬಾರದು. ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು ಎನ್ನುವುದಕ್ಕೆ ಸ್ವಾವಲಂಬಿ ರೈತರು ಮಾದರಿ ಎಂದು ಹೇಳಿದರು.
PublicNext
03/12/2020 04:59 pm