ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉ.ಪ್ರ. 11 ವಿಧಾನಪರಿಷತ್ ಸ್ಥಾನದ ಮತ ಎಣಿಕೆ ಆರಂಭ

ಲಕ್ನೋ: ಉತ್ತರಪ್ರದೇಶದ 11 ವಿಧಾನಪರಿಷತ್ ಸ್ಥಾನಕ್ಕೆ ನಡೆದ ಚುನಾವಣೆಯ ಮತ ಎಣಿಕೆ ಗುರುವಾರ (ಡಿಸೆಂಬರ್ 3, 2020) ಬೆಳಗ್ಗೆ 8ಗಂಟೆಗೆ ಬಿಗಿ ಭದ್ರತೆ ನಡುವೆ ಲಕ್ನೋದ ರಮಾಬಾಯ್ ಅಂಬೇಡ್ಕರ್ ಮೈದಾನದಲ್ಲಿ ಆರಂಭಗೊಂಡಿರುವುದಾಗಿ ವರದಿ ತಿಳಿಸಿದೆ.

ಹನ್ನೊಂದು ಎಂಎಲ್ ಸಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶೇ.55.47ರಷ್ಟು ಮತದಾನವಾಗಿತ್ತು.

11 ಸ್ಥಾನಗಳಿಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ 199 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

ಶಿಕ್ಷಕರು ಹಾಗೂ ಪದವೀಧರ ಕ್ಷೇತ್ರದ ಮತಎಣಿಕೆಗೆ 14 ಸುತ್ತು ನಡೆಯಲಿದ್ದು, ಮಧ್ಯಾಹ್ನದೊಳಗೆ 11 ಎಂಎಲ್ ಸಿ ಕ್ಷೇತ್ರಗಳ ಫಲಿತಾಂಶ ಹೊರಬೀಳುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

Edited By : Nirmala Aralikatti
PublicNext

PublicNext

03/12/2020 11:30 am

Cinque Terre

29.86 K

Cinque Terre

0

ಸಂಬಂಧಿತ ಸುದ್ದಿ