ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಏನೇ ಆಗಲಿ ರಾಜ್ಯದಲ್ಲಿ ಲವ್ ಜಿಹಾದ್ ಬ್ಯಾನ್ ಆಗುತ್ತೆ: ಆರ್.ಅಶೋಕ್

ಮಂಡ್ಯ: ಏನೇ ಆಗಲಿ ನಾವು ಕರ್ನಾಟಕದಲ್ಲಿ ಲವ್ ಜಿಹಾದ್ ಬ್ಯಾನ್ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ಕೆ.ಆರ್.ಪೇಟೆಯಲ್ಲಿ ಮಾತನಾಡಿದ ಸಚಿವರು, ದೇಶದಲ್ಲಿ ಲವ್ ಜಿಹಾದ್ ಇರೋದು ದೊಡ್ಡ ಅಪರಾಧ. ಕೇರಳದಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ಮತಾಂತರ ಮಾಡಿ ಮದುವೆಯಾದರೆ ಒಂದು, ಎರಡು ಲಕ್ಷ ಪರಿಹಾರ ನೀಡುತ್ತಿದ್ದಾರೆ. ಆದರೆ ನಾವು ಕರ್ನಾಟಕದಲ್ಲಿ ಬ್ಯಾನ್ ಮಾಡುತ್ತೇವೆ. ಲವ್ ಜಿಹಾದ್ ಮಾಡುವವರನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರೀತಿ ಬೇರೆ ಲವ್ ಜಿಹಾದ್ ಬೇರೆ. ಅವರು ಹಿಂದೂ ಹೆಣ್ಣು ಮಕ್ಕಳನ್ನು ಪ್ರೀತಿ ಮಾಡಿ ಮದುವೆಯಾಗುತ್ತಾರೆ. ಅದೇ ವರ್ಷದಲ್ಲಿ ಮೂರು ಮದುವೆಯಾಗುತ್ತಾರೆ. ಮತಾಂತರ ಉದ್ದೇಶದಿಂದ ಇದು ಹಿಂದೂ ಹೆಣ್ಣು ಮಕ್ಕಳನ್ನು ವಿವಾಹವಾಗುತ್ತಾರೆ. ಇದನ್ನು ನಾವು ತಡೆದೇ ತಡೆಯುತ್ತೇವೆ ಎಂದು ತಿಳಿಸಿದ್ದಾರೆ.

Edited By : Vijay Kumar
PublicNext

PublicNext

02/12/2020 07:11 pm

Cinque Terre

58.1 K

Cinque Terre

6