ಕೊಪ್ಪ: ಶ್ರೀ ಕೃಷ್ಣನ ತಂತ್ರವನ್ನೆಲ್ಲ ಬಳಸಿ ಗ್ರಾಮ ಪಂಚಾಯತ್ ಚುನಾವಣೆ ಗೆಲ್ಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಪಟ್ಟಣದ ಪುರಭವನದಲ್ಲಿ ಬಿಜೆಪಿ ಆಯೋಜಿಸಿದ್ದ ಗ್ರಾಮ ಸ್ವರಾಜ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಾರ್ಯಕರ್ತರು ಪ್ರತಿ ಮನೆಗೆ ತೆರಳಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಯನ್ನು ಜನರಿಗೆ ಮನದಟ್ಟು ಮಾಡಬೇಕು. ಚುನಾವಣೆಯಲ್ಲಿ ಶೇ.80ಕ್ಕಿಂತ ಅಧಿಕ ಸ್ಥಾನ ಗೆಲ್ಲಬೇಕು. ಸಾಮಾನ್ಯ ಕಾರ್ಯಕರ್ತರ ನಿರ್ಧಾರವೇ ನಮ್ಮೆಲ್ಲರ ಗೆಲುವಿನ ಮೂಲ ಕಾರಣವಾಗಿದೆ. ಬಿಜೆಪಿಯಲ್ಲಿ ಎಲ್ಲ ಮೀಸಲಾತಿಗೆ ಸೇರಿದ ಮಂದಿ ಇದ್ದಾರೆ. ಭವಿಷ್ಯದಲ್ಲಿ ಚುನಾವಣೆ ಎಂದರೆ ಬಿಜೆಪಿ ಗೆಲುವು ಎಂದಾಗಬೇಕು. ಹಳಬರನ್ನು ಕಡೆಗಣಿಸಬಾರದು, ಪ್ರಾಮಾಣಿಕರಿಗೆ ಆದ್ಯತೆ ನೀಡಬೇಕು ಎಂದರು.
PublicNext
02/12/2020 10:47 am