ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ: ಏನಿದು ಪ್ರಕರಣ?

ಬೆಂಗಳೂರು: ಮಾಜಿ ಮಿನಿಸ್ಟರ್ ವರ್ತೂರು ಪ್ರಕಾಶ್ ಮೂರು ದಿನಗಳ ಕಾಲ ಕಿಡ್ನಾಪ್ ಆಗಿದ್ದರು. ಕಿಡ್ನಾಪ್ ಮಾಡಿದ್ದ ದುಷ್ಕರ್ಮಿಗಳು ಪ್ರಕಾಶ್ ಗೆ ಮಾನಸಿಕ ಹಾಗೂ ದೈಹಿಕವಾಗಿ ಚಿತ್ರಹಿಂಸೆ ನೀಡಿದ್ದಾರೆ ಎನ್ನಲಾಗಿದೆ. ಆದ್ರೆ ಅಪಹರಣ ನಡೆದು ಮೂರು ದಿನಗಳಲ್ಲಿ ಅವರ ಕುಟುಂಬಸ್ಥರು ಯಾಕೆ ದೂರು ನೀಡಿರಲಿಲ್ಲ ಎಂಬ ಪ್ರಶ್ನೆ ಎದ್ದಿದೆ.

ಅಪಹರಣಕಾರರು ವರ್ತೂರು ಪ್ರಕಾಶ್ ಅವರನ್ನು ಕಾರಿನಿಂದ ಇಳಿಸಿದ ಬಳಿಕ ಅಪರಿಚಿತ ಕಾರನ್ನು ಅಡ್ಡ ಹಾಕಿ ಕೆ.ಆರ್.ಪುರಂನಲ್ಲಿರುವ ಸಾಯಿ ಆಸ್ಪತ್ರೆವರೆಗೆ ಡ್ರಾಪ್ ಪಡೆದಿದ್ದೆ. ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿದ್ದಾಗ ಮಂಗಳವಾರ ಬೆಳ್ಳಂದೂರು ಸ್ಮಶಾನದ ಬಳಿ ನನ್ನ ಕಾರು ಪತ್ತೆಯಾಗಿದೆ. ಗಾಯಗೊಂಡಿದ್ದ ಕಾರಣ ಈಗ ತಡವಾಗಿ ದೂರು ನೀಡುತ್ತಿದ್ದೇನೆ ಎಂದು ವರ್ತೂರ್ ಪ್ರಕಾಶ್ ತಿಳಿಸಿದ್ದಾರೆ.

ಕೋಲಾರದ ಬೆಗ್ಲಿಹೊಸಹಳ್ಳಿ ಫಾರಂಹೌಸ್‍ನಿಂದ ಬೆಂಗಳೂರಿಗೆ ಬರುತ್ತಿದ್ದಾಗ ಸಂಜೆ 7 ಗಂಟೆಗೆ ಅಪಹರಣ ನಡೆದಿದೆ. ಎರಡು ಕಾಡುಗಳಲ್ಲಿ ಬಂದಿದ್ದ 8 ಜನರ ತಂಡ ಲಾಂಗ್ ತೋರಿಸಿ ಕಾರು ಅಡ್ಡಗಟ್ಟಿ ವರ್ತೂರ್ ಪ್ರಕಾಶ್, ಚಾಲಕನ ಅಪಹರಣ ಮಾಡಿದ್ದಾರೆ. ಕೈ ಕಾಲುಗಳನ್ನು ಹಗ್ಗದಿಂದ ಬಿಗಿದು ಹಲ್ಲೆ ನಡೆದು ಕಣ್ಣಿಗೆ ಪಟ್ಟಿ ಕಟ್ಟಿ ರಹಸ್ಯ ಸ್ಥಳಕ್ಕೆ ಕರೆದೊಯ್ದು 30 ಕೋಟಿಗೆ ಬೇಡಿಕೆ ಇಟ್ಟಿದ್ದಾರೆ.

ಅಪಹರಣಕಾರರ ಹಿಂಸೆ ತಾಳಲಾರದೇ ನಯಾಜ್ ಎಂಬಾತನ ಮೂಲಕ 48 ಲಕ್ಷ ಹಣ ವರ್ತೂರ್ ತರಿಸಿಕೊಂಡಿದ್ದಾರೆ. ಕೋಲಾರದ ಕಾಫಿಡೇ ಶಾಪ್ ಬಳಿ ನಯಾಜ್‍ನಿಂದ 48 ಲಕ್ಷ ರೂ. ಹಸ್ತಾಂತರವಾಗಿದೆ. ಈ ವೇಳೆ ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟ ಅಪಹರಣಕಾರರು ಚಿತ್ರಹಿಂಸೆ ನೀಡಿ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ ಎಂದು ವರ್ತೂರು ಪ್ರಕಾಶ್ , ಪಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

Edited By : Nagaraj Tulugeri
PublicNext

PublicNext

02/12/2020 09:34 am

Cinque Terre

92.15 K

Cinque Terre

4