ಚಾಮರಾಜನಗರ: ಅಪ್ಪ ಚೆಕ್ ಮೂಲಕ, ಮಗ ಆರ್.ಟಿ.ಜಿ.ಎಸ್ ಮೂಲಕ ಲಂಚ ತಗೋತಾರೆ ಎಂಬ ಸಿದ್ದರಾಮಯ್ಯ ಆರೋಪ ಮಾಡುತ್ತಿರುವ ಬಗ್ಗೆ ಕೊಳ್ಳೇಗಾಲದಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು, ಸಿದ್ದರಾಮಯ್ಯ ಒಬ್ಬ ವಕೀಲರು. ಸುಮ್ನೆ ಯಾರೋ ರೋಡಲ್ಲಿ ಬಂದೋನು ಆರೋಪ ಮಾಡ್ತಾನೆ ಅಂತ ನಾಯಕರು ಈ ರೀತಿ ಮಾತನಾಡುವುದರಲ್ಲಿ ಅರ್ಥ ಇಲ್ಲ ಎಂದರು.
ಬಿಜೆಪಿ ಬಗ್ಗೆ ಮಾತನಾಡಲು ಕಾಂಗ್ರೆಸ್ಗೆ ಏನೇನೂ ಉಳಿದಿಲ್ಲ. ಅದರಲ್ಲೂ ಕೆ.ಆರ್. ಪೇಟೆ, ಶಿರಾ ಉಪಚುನಾವಣೆಗಳಲ್ಲಿ ತಮ್ಮ ಅಸ್ತಿತ್ವ ಕಳೆದುಕೊಂಡು ಜನರಿಗೆ ಮುಖ ತೋರಿಸಲು ಆಗುತ್ತಿಲ್ಲ. ವಿಪಕ್ಷಗಳು ಚುನಾವಣೆ ಎದುರಿಸುವ ನೈತಿಕ ಸ್ಥೈರ್ಯ ಕಳೆದುಕೊಂಡಿವೆ. ಹಾಗಾಗಿ ಹತಾಶರಾಗಿ ಯಡಿಯೂರಪ್ಪ ಅವರ ಬಗ್ಗೆ ಇಲ್ಲಸಲ್ಲದ ಮಾತನಾಡುತ್ತಾರೆ ಎಂದು ವಿಜಯೇಂದ್ರ ವಿಷಾದ ವ್ಯಕ್ತಪಡಿಸಿದರು.
PublicNext
01/12/2020 03:41 pm